ಹೆಂಡತಿಗೆ ಹೊಡೆಯುವ ಗಂಡ ಗಂಡಸೇ ಅಲ್ಲ..! ಚಿತ್ರ ನಟನಿಗೆ ಬಿಗ್ ಬಾಸ್ ಮನೆಯಲ್ಲಿ ಚಳಿ ಬಿಡಿಸಿದ ದೀಪಿಕಾ ದಾಸ್..!

Must read

ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದಾಗಿನಿಂದ ಸಹ ಯಾವುದೇ ರೀತಿಯ ಜಗಳ ಇರಲಿಲ್ಲ ಆದರೆ ಎರಡನೇ ದಿನ ಮನೆ ಪ್ರವೇಶಿಸುವ ಸಂದರ್ಭದಲ್ಲಿ ರಾಜು ತಾಳಿಕೋಟೆ ಅವರು ದೀಪಿಕಾ ಅವರ ಬೆನ್ನಿಗೆ ಬಾರಿಸಿ ಮುಂದೆ ನಡೆಯುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ದೀಪಿಕಾ ದಾಸ್ ರಾಜು ತಾಳಿಕೋಟೆ ಅವರಿಗೆ ಹೊಡೆದು ಮಾತನಾಡಿಸಬೇಡಿ ಸರಿಯಾಗಿ ಮಾತನಾಡಿ ಎಂದು ಕೋಪದಿಂದ ಬೈದಿದ್ದಾರೆ. ಇನ್ನು ದೀಪಿಕಾದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜು ತಾಳಿಕೋಟೆ ಅವರು ಮುಂದೆ ಮದುವೆಯಾದ ನಂತರ ನಿಮ್ಮ ಗಂಡ ಹೊಡೆದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದರು.

ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್ ಅವರು ಮದುವೆಯಾದ ನಂತರ ಹೆಂಡತಿಗೆ ಹೊಡೆಯುವ ಗಂಡ ಗಂಡಸೇ ಅಲ್ಲ ಎಂದು ಖಡಕ್ ಆಗಿ ರಾಜು ತಾಳಿಕೋಟೆ ಅವರಿಗೆ ಟಾಂಗ್ ನೀಡಿದ್ದಾರೆ. ಹೆಂಡತಿಗೆ ಹೊಡೆಯುವ ಹಕ್ಕನ್ನು ಗಂಡನಿಗೆ ಯಾರು ನೀಡಿದ್ದಾರೆ ಮಾತಿನಲ್ಲಿ ಬುದ್ಧಿ ಹೇಳಲಿ ಅದನ್ನು ಬಿಟ್ಟು ಹೆಣ್ಣಿನ ಮೇಲೆ ಕೈ ಮಾಡುವ ಅಧಿಕಾರ ಯಾವ ಗಂಡಸಿಗೂ ಸಹ ಇಲ್ಲ ಎಂದು ದೀಪಿಕಾ ದಾಸ್ ಅವರು ರಾಜು ತಾಳಿಕೋಟೆ ಅವರಿಗೆ ಟಾಂಗ್ ಕೊಟ್ಟರು.

- Advertisement -spot_img

More articles

- Advertisement -spot_img

Latest article