ಚುನಾವಣಾ ಆಯೋಗವು ಗಿರ್ ಅರಣ್ಯ ಪ್ರದೇಶದಲ್ಲಿ ಏಕೈಕ ಮತದಾರನಿಗಾಗಿ ಮತಗಟ್ಟೆ ಹಾಗೂ ಸಮುದ್ರ ನಡುವೆ ಇರುವ ನಡುಗಡ್ಡೆಯಲ್ಲಿರುವ 40 ಮಂದಿಗಾಗಿ ವಿಶೇಷ ಮತಗಟ್ಟೆಯನ್ನು ಸ್ಥಾಪಿಸಿದ್ದು ವಿಶೇಷ.
ಗಿರ್ ಅರಣ್ಯ ಪ್ರದೇಶದ ಮತಗಟ್ಟೆಯಲ್ಲಿ ಮತದಾನ ಮಾಡಿದ ವ್ಯಕ್ತಿಯ ಹೆಸರು ಭರತ್ ದಾಸ್ ಬಾಪು. ದಟ್ಟಾರಣ್ಯದ ನಡುವೆ ಇರುವ ಪುರಾಣ ಪ್ರಸಿದ್ಧ ಬನೇಜ್ ದೇಗುಲದ ಬಳಿ ಈ ಮತಗಟ್ಟೆ ಸ್ಥಾಪಿಸುವುದು ಕಷ್ಟಕರವಾಗಿತ್ತು.
ಈ ದೇಗುಲದ ಅರ್ಚಕರಾದ 62 ವರ್ಷ ವಯಸ್ಸಿನ ಮಹಾಂತ ಭರತ್ ದಾಸ್ ದರ್ಶನ್ ದಾಸ್ ಅವರು ಈ ದೇಗುಲಕ್ಕೆ ಮಹಾಭಾರತ ಕಾಲದ ನಂಟಿದೆ ಎಂದಿದ್ದಾರೆ. ಈ ಮತಗಟ್ಟೆಯಲ್ಲದೆ ಜಾಮ್ ನಗರದ ಓಖಾ ಕರಾವಳಿಯಿಂದ 30 ಕಿ.ಮೀ ದೂರದ ಸಮುದ್ರ ಮಧ್ಯ ಕಾಣಿಸುವ ಅಜಾದ್ ದ್ವೀಪದಲ್ಲಿ ಮತಗಟ್ಟೆ ಸ್ಥಾಪಿಸಿ, ಅಲ್ಲಿನ 40 ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅನುವು ಮಾಡಿಕೊಳ್ಳಲಾಯಿತು.