ಬಿಜೆಪಿ ನಾಯಕರು ತಮ್ಮ ಪಕ್ಷದ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದರೆ, ಈ ಸಮಯದಲ್ಲಿಯೇ ಬ್ಯಾಂಕಾಕಿಗೆ ರಾಹುಲ್ ಗಾಂಧಿಯವರು ತೆರಳಿದ್ದು, ಕಾಂಗ್ರೆಸ್ಸಿಗರ ಮನಸಿನಲ್ಲಿ ಕಳವಳವನ್ನು ಉಂಟು ಮಾಡಿತ್ತು.
ಈಗ ರಾಹುಲ್ ಗಾಂಧಿ, ಅಕ್ಟೋಬರ್ 13ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಹಾಗೂ ಅಕ್ಟೋಬರ್ 14ರಂದು ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ. ಹಾಗದರೆ ರಾಹುಲ್ ಬ್ಯಾಂಕಾಕಿಗೆ ಹೊಗಿದ್ದೇಕೆ ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ .