ಚೆನ್ನೈ ಬೀದಿಯಲ್ಲಿ ಹುಚ್ಚನಂತೆ ಅಲೆದಾಡ್ತಿದ್ದಾರಂತೆ ವೆಂಕಟ್​..! ವಿಡಿಯೋ ಹರಿಬಿಟ್ಟ ಭುವನ್ ಹೇಳಿದ್ದೇನು?

Date:

ಹುಚ್ಚವೆಂಕಟ್​.. ನಟಿ ರಮ್ಯಾ ಅವರನ್ನು ಮದ್ವೆಯಾಗಿದ್ದೀನಿ ಎಂದು ಹೇಳಿ ಐದಾರು ವರ್ಷದ ಹಿಂದೆ ಸುದ್ದಿಯಾಗಿ ನೋಡು ನೋಡುತ್ತಿದ್ದಂತೆ ಯೂಟ್ಯೂಬ್ ಸ್ಟಾರ್ ಆಗಿ ಮೆರೆದವರು,..! ನಟ, ನಿರ್ದೇಶಕ, ನಿರ್ಮಾಪಕ ಎನ್ನುವ ಹಣೆಪಟ್ಟಿ ಕೂಡ ಹುಚ್ಚ ವೆಂಕಟ್ ಎಂಬ ಸಕಲ ಕಲಾ ವಲ್ಲಭನ ಬೆನ್ನಿಗಿದೆ.
ಯೂಟ್ಯೂಬ್​ನಲ್ಲಿ ಸೌಂಡು ಮಾಡಿ, ಯೂಟ್ಯೂಬ್ ಸ್ಟಾರ್ ಆಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿ ರಂಜಿಸಿದ್ದರು ವೆಂಕಟ್. ಆದರೆ ಪ್ರತಿಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ನಡೆಸಿ ಶೋನಿಂದ ಕಿಕ್​ಔಟ್ ಆಗಿದ್ದರು. ಬಳಿಕ ಕೆಲವು ರಿಯಾಲಿಟಿ ಶೋ, ಸಿನಿಮಾದಲ್ಲಿ ನಟಿಸಿದ್ದರು. ಸ್ವತಃ ಒಂದಿಷ್ಟು ಸಿನಿಮಾ ಮಾಡಿ ಸರಣಿ ಸಿನಿಮಾಗಳ ಟ್ರೇಲರ್​ಗಳನ್ನು ಒಟ್ಟೊಟ್ಟಿಗೆ ಬಿಟ್ಟಿದ್ದೂ ಇದೆ..! ಹುಟ್ಟಿದ ಊರನು ಬಿಟ್ಟು ಬಂದ ಮೇಲೆ… ಹಾಡನ್ನು ಹಾಡಿದ್ದು ಇದೇ ವೆಂಕಟ್.. ಆ ಹಾಡು ಯಾವ ಮಟ್ಟಿಗೆ ಹಿಟ್ ಆಗಿದೆ ಎನ್ನುವುದು ನಿಮಗೂ ಗೊತ್ತು. ಎಲೆಕ್ಷನ್​ಗೂ ನಿಂತಿದ್ದರು,,!
ಆದರೆ, ಈಗ ವೆಂಕಟ್ ಮಾನಸಿಕವಾಗಿ ಸಮಪೂರ್ಣ ಜರ್ಜರಿತರಾದಂತಿದೆ. ಚೆನ್ನೈನ ಬೀದಿ ಬೀದಿಯಲ್ಲಿ ಚಪ್ಪಲಿ ಇಲ್ಲದೆ ಮಾಸಿದ ಬಟ್ಟೆ ಧರಿಸಿ ಸುತ್ತುತ್ತಿದ್ದಾರೆ ಎಂದು ತಿಳಿದುಬಂದಿದೆ. ಸದಾ ನನ್ ಮಗಂದ್, ನನ್ ಎಕ್ಕಡ ಎಂದು ಮಾತಾಡುವ ವೆಂಕಟ್​ ಎಕ್ಕಡೆ ಇಲ್ಲದೆ ಓಡಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ರಾಂಧವ ಸಿನಿಮಾ ತಂಡದ ಸದಸ್ಯರೊಬ್ಬರು ಆ ಸಿನಿಮಾದ ನಟ ಭುವನ್​ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. ಭುವನ್ ಅದನ್ನು ನೋಡಿ ಮರುಗಿದ್ದಾರೆ.
ಫೇಸ್​ಬುಕ್​ನಲ್ಲಿ ಆ ವಿಡಿಯೋ ಜೊತೆಗೆ ತಾನೊಂದು ಮನವಿ ಮಾಡಿ ವಿಡಿಯೋ ಹರಿಬಿಟ್ಟಿದ್ದಾರೆ ಭುವನ್, ಗೆಳೆಯರೇ ಹುಚ್ಚಾ ವೆಂಕಟ್ ಯೂಟ್ಯೂಬ್ ಸ್ಟಾರ್. ಅವರ ಈ ವಿಡಿಯೋ ನೋಡಿ ನನಗೆ ಕರಳು ಚಿವುಟಿದ ಹಾಗೆ ಆಯಿತು. ಹಾಕೋದಕ್ಕೆ ಕಾಲಿಗೆ ಚಪ್ಪಲಿಯೂ ಇಲ್ಲದೆ ಚೆನ್ನೈ ನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ರಾಂಧವ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಫ್ಯಾಮಿಲಿ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು ಅವರಿಗೆ ಸಹಾಯ ಮಾಡೋಣ. ಕೈ ಜೋಡಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಭುವನ್ ವಿನಂತಿಸಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...