ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಮಾನವೀಯತೆ ಮೆರೆದಿದ್ದಾರೆ.ಸದಾ ಕಷ್ಟದಲ್ಲಿರುವವರಿಗೆ ಮಿಡಿಯುವ ಡಿ. ಬಾಸ್ ನವರಸ ನಾಯಕ ಜಗ್ಗೇಶ್ ಜನಪ್ರಿಯ ಕಲಾವಿದರೊಬ್ಬರ ಪರವಾಗಿ ನೀಡಿದ ಕರೆಗೆ ಕೂಡಲೇ ಸ್ಪಂದಿಸಿದ್ದಾರೆ.
ತೊಂದರೆಯಲ್ಲಿರುವವರಿಗೆ ಯಾವಗಲೂ ನೆರವಾಗುವ ದರ್ಶನ್ ಚಂದನವನದ ನಟರೊಬ್ಬರ ಸಹಾಯಕ್ಕೆ ಧಾವಿಸಿ ಸುದ್ದಿಯಲ್ಲಿದ್ದಾರೆ.
ಹೌದು, ನಿಮಗೆ ಗೊತ್ತಿರಬಹುದು ಕಿಲ್ಲರ್ ವೆಂಕಟೇಶ…ಸ್ಯಾಂಡಲ್ ವುಡ್ ನ ಸುಮಾರು 250 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ವೆಂಕಟೇಶ್ ರವರೀಗ ಲಿವರ್ ವೈಫಲ್ಯದಿಂದ ಬಳಲುತ್ತಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು ಭೇಟಿ ಮಾಡಿದ ಜಗ್ಗೇಶ್ ತಾವು ಕೂಡ ಸ್ಪಂದಿಸಿದ್ದಲ್ಲದೆ ನೆರವಿಗೆ ಧಾವಿಸುವಂತೆ ಕೇಳಿಕೊಂಡಿದ್ದರು. ಅದಕ್ಕೆ ದರ್ಶನ್ ಸ್ಪಂದಿಸಿ ಕೂಡಲೇ 1 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಆ ವಿಷಯವನ್ನು ಕೂಡ ಜಗ್ಗೇಶ್ ಹಂಚಿಕೊಂಡಿದ್ದಾರೆ.