No menu items!
3 C
Munich
Friday, May 1, 2026

ಇವರೇ ದೇಶದ ಏಕೈಕ ಮಹಿಳಾ ಕಮಾಂಡೋ ಟ್ರೈನರ್..!

Must read

ಡಾ.ಸೀಮಾ ರಾವ್. ಇವರ ಬಗ್ಗೆ ಹೇಳಬೇಕೆಂದರೆ, ಭಾರತದ ಮೊದಲ ಹಾಗೂ ಏಕೈಕ ಕಮಾಂಡೋ ತರಬೇತುಗಾರ್ತಿ.

ಇವರು ತಮ್ಮ ಬ್ಲಾಕ್ ಬೆಲ್ಟ್ನಲ್ಲಿ 7 ಪದಕಗಳನ್ನು ಸಂಪಾದಿಸಿದ್ದಾರೆ. ಸೀಮಾ ಅವರೀಗ ಏಷ್ಯಾದ ಅತಿ ಹಿರಿಯ ಬ್ಲಾಕ್ ಬೆಲ್ಟ್ ಹೋಲ್ಡರ್ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ ಅವರು ಭಾರತೀಯ ಯೋಧರಿಗೆ ಕಠಿಣ ತರಬೇತಿ ನೀಡುತ್ತಿದ್ದಾರೆ.


ಸೀಮಾ ಅವರ ತಂದೆ ರಮಾಕಾಂತ್ ಸಿನರಿ ಪ್ರಾಧ್ಯಾಪಕರಾಗಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸೀಮಾ ರಾವ್ ಅವರ ಪತಿ ಒಬ್ಬ ನಿಷ್ಠಾವಂತ ಸೇನಾಧಿಕಾರಿ. ಭಾರತದ ಸಶಸ್ತ್ರ ಪಡೆಗಳಿಗೆ ಸೀಮಾ, ನಿಕಟ ಹೋರಾಟದ ಟ್ರಿಕ್ಸ್ ಕಲಿಸ್ತಾರೆ.
ಅಷ್ಟೇ ಅಲ್ಲ ಶೂಟಿಂಗ್, ಪರ್ವತಾರೋಹಣ, ಅಗ್ನಿಶಾಮಕ ಕರ್ತವ್ಯಗಳು ಎಲ್ಲದರಲ್ಲೂ ಸೀಮಾ ನೈಪುಣ್ಯ ಹೊಂದಿದ್ದಾರೆ. ಇವೆಲ್ಲದರ ಬಗೆಗೂ ಸೈನಿಕರಿಗೆ ತರಬೇತಿ ನೀಡುತ್ತಾರೆ.


ಬ್ರೂಸ್ ಲೀ ಹುಟ್ಟುಹಾಕಿದ ಜನಪ್ರಿಯ ಮಾರ್ಷಲ್ ಆರ್ಟ್ ‘JEET KUNE DO ‘ ಅನ್ನು ಬಲ್ಲವರು ಜಗತ್ತಿನಲ್ಲಿ ಕೇವಲ 10 ಮಹಿಳೆಯರು ಮಾತ್ರ, ಅವರಲ್ಲಿ ಸೀಮಾ ರಾವ್ ಕೂಡ ಒಬ್ಬರು. ‘ಹಾಥಪಾಯಿ’ ಎಂಬ ಸಿನಿಮಾವೊಂದನ್ನು ಕೂಡ ಸೀಮಾ ನಿರ್ಮಾಣ ಮಾಡಿದ್ದಾರೆ.
ಮಾರ್ಷಲ್ ಆರ್ಟ್ ಇರುವ ಭಾರತದ ಮೊಟ್ಟಮೊದಲ ಸಿನಿಮಾ ಅದು. 2014ರಲ್ಲಿ ಸೀಮಾ ರಾವ್ ಅವರ ‘ಹಾಥಪಾಯಿ’ ಚಿತ್ರಕ್ಕೆ ಜೂರಿ ಮೆಚ್ಚುಗೆಯ ಜೊತೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಲಭಿಸಿತ್ತು.
ಡಿಫೆನ್ಸ್ ಅಗೇನಸ್ಟ್ ರೇಪ್ & ಈವ್ ಟೀಸಿಂಗ್’ ಅಥವಾ DARE ಹೆಸರಿನ ಕಾರ್ಯಕ್ರಮವೊಂದನ್ನು ಸೀಮಾ ಹಮ್ಮಿಕೊಂಡಿದ್ದಾರೆ. ಡೇರ್ ಮೂಲಕ ಸೀಮಾ ಮಹಿಳೆಯರಿಗೆ ಸ್ವಯಂ ರಕ್ಷಣಾ ಕೌಶಲ್ಯವನ್ನು ಕಲಿಸುತ್ತಿದ್ದಾರೆ. ಮುಂಬೈನಲ್ಲಿ ಅದರಲ್ಲೂ ಕಾರ್ಪೊರೇಟ್ ಜಗತ್ತಿನಲ್ಲಿ ಸೀಮಾ ಅವರ ಡೇರ್ ಕಾರ್ಯಕ್ರಮ ಭಾರೀ ಜನಪ್ರಿಯತೆ ಗಳಿಸಿದೆ.


ಇನ್ನು DARE ಕಾರ್ಯಕ್ರಮ ಮಹಿಳೆಯರ ಪಾಲಿಗೆ ಅತ್ಯಂತ ಪ್ರಮುಖವಾದದ್ದು, ಇದು ಮಾನಸಿಕ ಮತ್ತು ದೈಹಿಕ ಅಸ್ತ್ರವಿದ್ದಂತೆ. ಪೋಲಿಗಳ ಕಿರುಕುಳ ಮತ್ತು ಇತರ ಲೈಂಗಿಕ ಆಕ್ರಮಣವನ್ನು ಎದುರಿಸಲು, ಕಾಮುಕರ ವಿರುದ್ಧ ಹೋರಾಡಲು ಪ್ರತಿಕೂಲ ಸಂದರ್ಭಗಳಲ್ಲಿ ಇದು ನೆರವಾಗುತ್ತದೆ.
ವಿಶೇಷ ಎಂದರೆ, DARE ಕಲಿಯಲು ಅತ್ಯಂತ ಸುಲಭ ಜೊತೆಗೆ ಇದರಿಂದ ಮಹಿಳಾ ಸಬಲೀಕರ ಕೂಡ ಸಾಧ್ಯ” ಅನ್ನೋದು ಸೀಮಾ ರಾವ್ ಅವರ ಅಭಿಪ್ರಾಯ.
ಒಟ್ಟಿನಲ್ಲಿ ಗಡಿ ಕಾಯುವ ಯೋಧರಲ್ಲಿ ಆತ್ಮವಿಶ್ವಾಸ ಮತ್ತು ಹೋರಾಟದ ಬಲ ತುಂಬುತ್ತಿರುವ ಸೀಮಾ ರಾವ್ ಅವರ ಪ್ರಯತ್ನ ನಿಜಕ್ಕೂ ಅದ್ಭುತ. ಇವರಿಗೆ ಪ್ರತಿಯೊಬ್ಬ ಭಾರತೀಯರೂ ಸಲಾಂ ಹೇಳಲೇಬೇಕು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article