ಜಗ್ಗೇಶ್ – ದರ್ಶನ್ ಫ್ಯಾನ್ಸ್ ನಡುವೆ ತಂದಿಟ್ಟು ತಮಾಷೆ ನೋಡಿದವನಾರು?

Date:

ನಟ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ವಿವಾದ ಸುಖಾಂತ್ಯ ಕಂಡಿದೆ. ದರ್ಶನ್ ಅವರೇ ಜಗ್ಗೇಶ್ ಅವರಿಗೆ ಕ್ಷಮೆ ಯಾಚಿಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಇನ್ನೂ ಇಷ್ಟೆಲ್ಲ ಸಂಭವಿಸಲು ಕಾರಣ ಆ ಒಬ್ಬ ವ್ಯಕ್ತಿ. ಹೌದು ಆ ಒಬ್ಬ ಕಾಣದ ವ್ಯಕ್ತಿ ಇಷ್ಟೆಲ್ಲಾ ಘಟನೆಗಳಿಗೆ ಕಾರಣ.

 

 

ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಲೀಕ್ ಮಾಡುವ ಮುಖಾಂತರ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಜಗಳ ತಂದಿಟ್ಟು ತಮಾಷೆ ನೋಡುತ್ತಾ ಕುಳಿತಿದ್ದ ಆ ವ್ಯಕ್ತಿ.

 

ಹೌದು ಇತ್ತ ಜಗ್ಗೇಶ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಮಾತಿಗೆ ಮಾತು ನಡೆಯುತ್ತಿದ್ದರೆ ಆ ವ್ಯಕ್ತಿ ಮಾತ್ರ ತಾನು ಅಂದುಕೊಂಡಿದ್ದನ್ನು ಸಾಧಿಸಿ ಖುಷಿಪಡುತ್ತಿದ್ದ. ಹೇಗಾದರೂ ಮಾಡಿ ಜಗ್ಗೇಶ್ ಮತ್ತು ದರ್ಶನ್ ಅವರನ್ನ ಬೇರೆ ಮಾಡಬೇಕು ಎಂದು ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದ ಆ ವ್ಯಕ್ತಿಗೆ ಇದೀಗ ನಿರಾಸೆಯಾಗಿದೆ. ಯಾಕೆಂದರೆ ಸ್ವತಃ ದರ್ಶನ್ ಅವರೇ ಜಗ್ಗೇಶ್ ಅವರ ಬಳಿ ಕ್ಷಮೆ ಯಾಚಿಸಿ ಒಂದಾಗಿದ್ದಾರೆ.

 

 

ಇಲ್ಲದ ಆಡಿಯೋವನ್ನು ತಿರುಚಿ ದಂಗೆ ಎಬ್ಬಿಸಿದ ಆ ಕಾಣದ ವ್ಯಕ್ತಿ ಇದೀಗ ಕಂಗಾಲಾಗಿರುವುದಂತೂ ಪಕ್ಕಾ. ಈ ರೀತಿ ಮನೆ ಹಾಳು ಮಾಡುವ ಕೆಲಸವನ್ನು ಆ ವ್ಯಕ್ತಿ ಇಲ್ಲಿಗೆ ನಿಲ್ಲಿಸುತ್ತಾನೋ ಅಥವಾ ಮತ್ತೆ ಮುಂದುವರೆಸುತ್ತಾನಾ ಎಂಬುದು ದೇವರೇ ಬಲ್ಲ..

Share post:

Subscribe

spot_imgspot_img

Popular

More like this
Related

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ ಏರಿಕೆ

ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವು ಮುಂದುವರಿಕೆ: ಸಂಖ್ಯೆ 29ಕ್ಕೆ...

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ: ಡಿಕೆ ಸುರೇಶ್

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅಭಿಪ್ರಾಯವನ್ನು ಹಲವು ಬಾರಿ ಹೇಳಿದ್ದೇನೆ:...

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ನಿಮಗಿದ್ಯಾ..? ಹಾಗಿದ್ರೆ ಈ ಸ್ಟೋರಿ ಓದಿ ಅನೇಕರು...

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ – IMD ಮುನ್ಸೂಚನೆ

ಮುಂದಿನ 4–5 ದಿನ ಮಳೆಯ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ...