No menu items!
12.4 C
Munich
Wednesday, April 29, 2026

ಹೃದಯವನ್ನು ಬೇಯಿಸಿ ಉಣಬಡಿಸಿದ!

Must read

ವಾಷಿಂಗ್ಟನ್: ತ್ರಿವಳಿ ಕೊಲೆ ಮಾಡಿದ ವ್ಯಕ್ತಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.ವಾಷಿಂಗ್ಟನ್: ತ್ರಿವಳಿ ಕೊಲೆ ಮಾಡಿದ ವ್ಯಕ್ತಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದು ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.

ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದ್ದು, ಆರೋಪಿ ನೆರೆಮನೆಯವಳನ್ನು ಕೊಂದು ಆಕೆಯ ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆರೋಪಿ ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಆಲೂಗಡ್ಡೆಯೊಂದಿಗೆ ಬೇಯಿಸಿ, ತನ್ನ ಕೈಯಾರೆ ಚಿಕ್ಕಪ್ಪ ಮತ್ತು ಅವರ ಪತ್ನಿಗೆ ಉಣಬಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಆರೋಪಿ ತನ್ನ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಪುತ್ರಿಯನ್ನು ಮನೆಯಲ್ಲಿ ಕೊಂದಿದ್ದಾನೆ. ಅಲ್ಲದೆ ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾರೆ.

ಸುಮಾರು 20 ವರ್ಷದಿಂದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಆರೋಪಿಯನ್ನು ಒಕ್ಲಹೋಮ ಗವರ್ನರ್ ಕೆವಿನ್ ಸ್ಟಿಟ್, ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದರು. ಆರೋಪಿ ಬಿಡುಗಡೆ ನಂತರ ಈ ಘಟನೆ ಸಂಭವಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article