ಕೆಲ ನಟರೇ ಹಾಗೆ ತಮ್ಮನ್ನು ಬೆಳೆಸಿದ ಜನರಿಗೆ ಕಷ್ಟ ಎಂದು ತಿಳಿದಾಗ ಮೊದಲು ಸಹಾಯಕ್ಕೆ ಇಳಿದುಬಿಡುತ್ತಾರೆ. ಎಷ್ಟೇ ಆಗಲಿ ಜನರು ತಮ್ಮ ಚಿತ್ರಗಳನ್ನು ನೋಡುವುದರಿಂದ ತಾವು ದಿನನಿತ್ಯ ಅನ್ನ ತಿನ್ನುತ್ತಿದ್ದೇವೆ ಎಂದು ಹೇಳಿಕೊಳ್ಳುವ ಹಲವಾರು ನಟರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಅಂತಹದ್ದೇ ಸಾಲಿಗೆ ಸೇರುವ ನಟ ತೆಲುಗಿನ ಹರ್ಷವರ್ಧನ್ ರಾಣೆ. ಹೌದು ತೆಲುಗಿನ ಈ ನಟ ಪ್ರಸ್ತುತ ಕೊರೋನಾವೈರಸ್ ಪರಿಸ್ಥಿತಿಯಲ್ಲಿ ತೆಗೆದುಕೊಂಡಿರುವ ನಿರ್ಧಾರದಿಂದ ಇದೀಗ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.
ತೆಲುಗಿನ ಈ ಹರ್ಷವರ್ಧನ್ ರಾಣೆ ಎಂಬ ನಟನಿಗೆ ಬೈಕ್ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಬಹುವೆಚ್ಚದ ರಾಯಲ್ ಎನ್ ಫೀಲ್ಡ್ ಬೈಕ್ ಒಂದನ್ನು ಸಿನಿಮಾದಿಂದ ತಾನು ಕಷ್ಟಪಟ್ಟು ದುಡಿದ ಹಣವನ್ನು ಕೂಡಿಸಿ ಕೊಂಡುಕೊಂಡಿದ್ದ. ಆದರೆ ಇದೀಗ ಆತ ತನ್ನ ಕನಸಿನ ಬೈಕನ್ನು ಮಾರಾಟ ಮಾಡಲು ಮುಂದಾಗಿದ್ದಾನೆ. ಹೌದು ನಟನ ಈ ನಿರ್ಧಾರಕ್ಕೆ ಕಾರಣ ಕೊರೊನಾ ಸೋಂಕಿತರು ಆಕ್ಸಿಜನ್ ಇಲ್ಲದೆ ಮರಣ ಹೊಂದುತ್ತಿ ರುವುದು.
ಹೌದು ಹಲವಾರು ಸೋಂಕಿತರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದ ಕಾರಣ ಮರಣ ಹೊಂದುತ್ತಿರುವುದನ್ನು ನೋಡಿದ ನಟ ಹರ್ಷವರ್ಧನ್ ತನ್ನ ಕೈಲಾದಷ್ಟು ಸಹಾಯವನ್ನು ಮಾಡಬೇಕೆಂದುಕೊಂಡ. ಹೀಗಾಗಿ ತಾನು ಕಷ್ಟಪಟ್ಟು ಖರೀದಿ ಮಾಡಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಮಾರಿ ಅದರಿಂದ ಬರುವ ಹಣವನ್ನು ಕೆಲವೊಂದಿಷ್ಟು ಸೋಂಕಿತರಿಗೆ ಆಕ್ಸಿಜನ್ ಕೊಡಿಸಲು ಬಳಸಲು ತೀರ್ಮಾನಿಸಿದ್ದಾನೆ. ತನ್ನ ಬಳಿ ಕೋಟಿ ಕೋಟಿ ಇಲ್ಲದೆ ಇದ್ದರೂ ಕೂಡ ಇರುವ ಬೈಕ್ ಒಂದನ್ನು ಮಾರಿ ಜನರಿಗೆ ಸಹಾಯ ಮಾಡಲು ಮನಸ್ಸು ಮಾಡಿರುವ ಈ ಯುವ ನಟನಿಗೆ ನಿಜಕ್ಕೂ ಹ್ಯಾಟ್ಸ್ ಆಫ್..