ಕಿರುತೆರೆಯಲ್ಲಿ ತನ್ನದೇ ಆದ ಹವಾ ಸೃಷ್ಟಿಸುತ್ತಿರುವ ಧಾರಾವಾಹಿ ಜೊತೆ ಜೊತೆಯಲಿ. ಇತ್ತೀಚೆಗಷ್ಟೇ ಶುರುವಾದರೂ ಸಹ ಅತಿ ಹೆಚ್ಚು ಟಿಆರ್ಪಿ ಸಾಧಿಸುವುದರ ಮುಖಾಂತರ ಎಲ್ಲ ಧಾರಾವಾಹಿಗಳನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನಕ್ಕೆ ಜೊತೆ ಜೊತೆಯಲ್ಲಿ ಏರಿದೆ. ಇನ್ನು ಜೊತೆಜೊತೆಯಲಿ ಧಾರಾವಾಹಿಯ ಮುಖ್ಯ ಪಾತ್ರಗಳಾದ ಆರ್ಯವರ್ಧನ್ ಮತ್ತು ಅನು ಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟುಕೊಂಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಅನು ಅವರು ಇನ್ಸ್ಟಾಗ್ರಾಮ್ ಖಾತೆಯ ಮುಖಾಂತರ ತಮ್ಮ ಅಭಿಮಾನಿಗಳಲ್ಲಿ ಕೈ ಮುಗಿದು ಕ್ಷಮೆ ಯಾಚಿಸಿದ್ದಾರೆ. ಅನು ಅವರು ಈ ರೀತಿ ಕ್ಷಮೆ ಯಾಚಿಸಲು ಕಾರಣ ಇನ್ ಸ್ಟಾ ಗ್ರಾಮ್ ನಲ್ಲಿ ಅವರಿಗೆ ಅಪಾರವಾದ ಅಭಿಮಾನಿಗಳು ಮೆಸೇಜ್ ಮಾಡಿದರೂ ಸಹ ಆ ಮೆಸೇಜ್ ಗಳಿಗೆ ರಿಪ್ಲೈ ಮಾಡಲು ಬಿಡುವಿಲ್ಲದಷ್ಟು ತಾನು ಅವರು ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ. ಹೀಗಾಗಿ ಮೆಸೇಜ್ ಮಾಡಲು ಆಗುತ್ತಿಲ್ಲ ದಯಮಾಡಿ ಕ್ಷಮಿಸಿ ಎಂದು ಅವರ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.