ಜಾತಿಗಣತಿ ಓದದೆ ಅವೈಜ್ಞಾನಿಕ ಅಂದ್ರೆ ಹೇಗೆ!? ಕಾನೂನು ಸಚಿವರ ಪ್ರಶ್ನೆ!?

Date:

ಜಾತಿಗಣತಿ ಓದದೆ ಅವೈಜ್ಞಾನಿಕ ಅಂದ್ರೆ ಹೇಗೆ!? ಕಾನೂನು ಸಚಿವರ ಪ್ರಶ್ನೆ!?

ಗದಗ:- ಜಾತಿಗಣತಿ ಓದದೆ ಅವೈಜ್ಞಾನಿಕ ಅಂದ್ರೆ ಹೇಗೆ!? ಎಂದು ಕಾನೂನು ಸಚಿವ ಹೆಚ್ ಕೆ ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಅವೈಜ್ಞಾನಿಕ ಹೇಗೆ ಆಗುತ್ತದೆ. ಅವೈಜ್ಞಾನಿಕ, ತಪ್ಪು ವರದಿ, ಯಾರೋ ಹೇಳಿ ಬರೆಸಿದ್ದಾರೆ ಎಂಬ ಮಾತುಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇವೆಲ್ಲಾ ಸಮಾಜ ದ್ರೋಹಿ ಮಾತುಗಳು ಎಂದರು.

ಜಾತಿಗಣತಿ ವಿವರಗಳು ಬಹುತೇಕ ಬಹಿರಂಗಗೊಂಡಿವೆ. ನಮಗೂ ಅದರ ಪ್ರತಿಗಳು ದೊರೆತಿವೆ. ಏ.17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಇದರಲ್ಲಿ ರಾಜಕಾರಣ ಮಾಡಲು ಹೋಗಬಾರದು. ಸಮೀಕ್ಷೆಗಳು ಏನಿವೆ ಎಂಬುದು ಗೊತ್ತಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಇನ್ನೂ ಏನು ನಿರ್ಣಯ ಮಾಡಿಲ್ಲ. ಏನು ಸಮೀಕ್ಷೆ ಆಗಿದೆ ಅದನ್ನು ನಾವು ಮಂಡನೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಜಾತಿ ಗಣತಿ ಬರೆದಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಯಾವುದಾದರೂ ವರದಿ ಮುಖ್ಯಮಂತ್ರಿ ಮನೆಯಲ್ಲಿ ಬರೆಯಲು ಸಾಧ್ಯನಾ. ಅದರಲ್ಲಿ ತಕರಾರು ಇದ್ದರೆ, ಹೀಗೆ ಮಾಡಿಲ್ಲ. ಹೀಗೆ ಮಾಡಿ ಎಂಬ ಅಭಿಪ್ರಾಯ ಸೂಚಿಸಿರಿ. ಅದನ್ನು ಸರಿಪಡಿಸುವುದು ಇದ್ದರೆ ಮಾಡುತ್ತೇವೆ ಎಂದರು

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...