ಸ್ಮ್ಯೂಲ್ ಎಂಬ ಸಿಂಗಿಂಗ್ ಅಪ್ಲಿಕೇಶನ್ ಬಗ್ಗೆ ನಿಮಗೆ ಗೊತ್ತಿರುತ್ತೆ. ಈ ಆಪ್ ನ ಮೂಲಕ ಇತರರ ಜೊತೆ ಹಾಡನ್ನು ಹಾಡಿ ಪೋಸ್ಟ್ ಮಾಡುತ್ತಾರೆ ಯೂಸರ್ ಗಳು. ಹೀಗೆ ಚಿಕ್ಕಬಳ್ಳಾಪುರದ ನಿವಾಸಿ ಗೃಹಿಣಿ ಶಿಲ್ಪ ಕೂಡ ಈ ಆಪ್ ಉಪಯೋಗಿಸುತ್ತಿದ್ದಳು. ಹೀಗೆ ಆಕೆ ಹಾಸನದ ಮೂಲದ ಯುವಕನ ಜೊತೆ ಲವ್ ನಲ್ಲಿ ಬಿದ್ದಿದ್ದಾಳೆ. ಇಬ್ಬರೂ ಸಹ ಅಪ್ಲಿಕೇಶನ್ ಮೂಲಕ ಪರಿಚಯ ಆಗಿ ತದನಂತರ ಲವ್ ಮಾಡಲು ಆರಂಭಿಸಿದ್ದಾರೆ.
ಆದರೆ ಇತ್ತೀಚೆಗೆ ಆ ಯುವಕ ಈಕೆಯ ಕರೆ & ಮೆಸೇಜ್ ಗೆ ಉತ್ತರಿಸಿಲ್ಲ. ಇದರಿಂದ ಆತನಿಗೆ ಪದೇ ಪದೇ ಕರೆ ಮಾಡಿದರೂ ಸರಿಯಾದ ರೆಸ್ಪಾನ್ಸ್ ಆತನಿಂದ ಬಂದಿಲ್ಲ. ಇದರಿಂದ ಮನನೊಂದ ಶಿಲ್ಪಾ ನೇಣಿಗೆ ಶರಣಾಗಿದ್ದಾಳೆ. ವಿಪರ್ಯಾಸವೆಂದರೆ ಈಕೆ ತನ್ನ ಗಂಡ & ಮಕ್ಕಳನ್ನು ನೆನೆಯದೇ ಸಾವಿಗೆ ತಲೆ ನೀಡಿದ್ದಾಳೆ. ಕೇವಲ ಒಂದು ಸಾಮಾಜಿಕ ಜಾಲತಾಣದ ಲವರ್ ಗೋಸ್ಕರ ಈ ರೀತಿ ಮಾಡಿಕೊಳ್ಳಲು ಹೇಗೆ ಮನಸ್ಸು ಬಂತೋ ಏನೋ..