ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ನಟ ಜೈ ಜಗದೀಶ್ ಅವರು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಗಮಿಸಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಯಾರಾದರೂ ತಪ್ಪು ಮಾಡಿದ್ದರೆ ಕ್ಷಮೆ ಕೇಳುವ ಅಗತ್ಯ ಇದ್ದರೆ ಕೇಳಬಹುದು ಎಂದು ಅವಕಾಶ ನೀಡಿದಾಗ ಜೈ ಜಗದೀಶ್ ಅವರು ಮಾತನಾಡಿ ನನಗೆ ಈ ಮೊದಲು ಮದುವೆಯಾಗಿತ್ತು ಇದು ಶಾಕಿಂಗ್ ಹೇಳಿಕೆ ನೀಡಿದರು.
ಹೌದು ವಿಜಯಲಕ್ಷ್ಮೀ ಸಿಂಗ್ ಅವರನ್ನು ಮದುವೆಯಾಗುವ ಮುನ್ನ ಜೈ ಸತೀಶ್ ಅವರು ರೂಪಾ ಎಂಬ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ ಒಬ್ಬಳು ಮಗಳು ಸಹ ಇದ್ದು ಆರು ವರ್ಷಗಳ ನಂತರ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಿ ಬೇರೆ ಬೇರೆಯಾಗಿದ್ದು ತಿಳಿದು ಬಂದಿದೆ. ಹೌದು ಯತೀಶ್ ಮತ್ತು ರೂಪ ಇಬ್ಬರು ಸಹ ಪ್ರೀತಿಸಿ ಮದುವೆಯಾಗಿ ತದನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ. ಇನ್ನು ಈ ರಹಸ್ಯವನ್ನು ಹಂಚಿಕೊಂಡ ಜೈಜಗದೀಶ್ ಅವರು ಅವರ ಮೊದಲ ಪತ್ನಿ ರೂಪ ಮತ್ತು ಅವರ ಮಗಳ ಪರಿಸ್ಥಿತಿ ನೆನೆಸಿಕೊಂಡು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದರು.