ಅಕ್ರಮ ಹಣ ಹೊಂದಿರುವ ಆರೋಪದಡಿಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದ ಇಡಿ ಅಧಿಕಾರಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿಟ್ಟಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಅನಾರೋಗ್ಯದ ಕಾರಣ ಡಿಕೆಶಿ ಅವರನ್ನು ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಇರಿಸಲಾಗಿತ್ತು ಆದರೆ ಇಂದು ಡಿಕೆಶಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಇನ್ನು ಕರ್ನಾಟಕದಿಂದ ತಿಹಾರ್ ಜೈಲಿಗೆ ಕಾಲಿಟ್ಟಿರುವ ಮೊದಲನೆಯ ರಾಜಕೀಯ ವ್ಯಕ್ತಿ ಎಂದರೆ ಅದು ಡಿಕೆಶಿ ಅವರೇ. ಇನ್ನು ಜಾಮೀನು ಸಿಗದೇ ಇತರೆ ಡಿಕೆಶಿ ಅವರಿಗೆ ತಿಹಾರ್ ಜೈಲೇ ಗತಿ. ತಿಹಾರ್ ಜೈಲು ಸೇರಿರುವ ಡಿಕೆಶಿ ಅವರಿಗೆ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಿಂಡಿ ಹಾಗೂ ಊಟದ ವ್ಯವಸ್ಥೆ ಇರಲಿದೆ. ಇಡ್ಲಿ ಚಪಾತಿ ಮತ್ತು ರೈಸ್ ಹಾಗೂ ಧಾಲ್ ವ್ಯವಸ್ಥೆಯನ್ನು ಪ್ರತಿನಿತ್ಯ ಮಾಡಲಾಗುವುದು. ಅಷ್ಟೇ ಅಲ್ಲದೇ ವಾರಕ್ಕೊಮ್ಮೆ ಡಿಕೆಶಿ ಅವರಿಗೆ ಮಾಂಸದೂಟದ ವ್ಯವಸ್ಥೆ ಇರಲಿದೆ.
ಇನ್ನು ಡಿಕೆಶಿ ಅವರ ಸೆಲ್ ನಲ್ಲಿ ಕೊಂದು ಫ್ಯಾನ್ ಮಲಗಲು ಒಂದು ಚಾಪೆ, ದಿಂಬು ಹಾಗೂ ಹೊದಿಕೆಗೆಂದು ಒಂದು ಬೆಡ್ಶೀಟ್ ವ್ಯವಸ್ಥೆ ಇರಲಿದೆ. ಕೋಟಿ ಕೋಟಿ ಒಡೆಯ ಡಿಕೆಶಿ ಅವರ ಜೈಲಿನ ಲೈಫ್ ಸ್ಟೈಲ್ ಈ ರೀತಿಯಾಗಿ ಇರಲಿದೆ.