ಜೊತೆಜೊತೆಯಲಿ ಧಾರವಾಹಿ ತಂಡ ಬಿಟ್ಟಿದ್ದ ಬಗ್ಗೆ ಅನುಸಿರಿಮನೆ ಸ್ಪಷ್ಟನೆ

Date:

‘ಜೊತೆ ಜೊತೆಯಲಿ’ ಧಾರಾವಾಹಿಯನ್ನು ನಟಿ ಮೇಘಾ ಶೆಟ್ಟಿ ಬಿಟ್ಟಿದ್ದಾರೆ, ಬೇರೆ ನಟಿಯ ಹುಡುಕಾಟ ನಡೆಯುತ್ತಿದೆ ಎಂದು ಕೆಲ ದಿನಗಳಿಂದ ಮಾತು ಕೇಳಿ ಬರುತ್ತಲಿತ್ತು. ಆ ಬಗ್ಗೆ ಮೇಘಾ ಶೆಟ್ಟಿ ವಿಡಿಯೋ ಮಾಡಿ ಉತ್ತರ ನೀಡಿದ್ದಾರೆ.
“ನಾಲ್ಕೈದು ದಿನಗಳಿಂದ ನಾನು ಧಾರಾವಾಹಿಯಿಂದ ಹೊರಗೆ ಬಂದಿದ್ದೇನೆ ಅಂತ ಸುದ್ದಿಯಾಗಿತ್ತು. ಕುಟುಂಬದಲ್ಲಿ ಗೊಂದಲಗಳು ಇರುತ್ತದೆ, ಅಂತೆಯೇ ನನ್ನ ಕುಟುಂಬದಲ್ಲಿಯೂ ಗೊಂದಲಗಳಾಗಿತ್ತು, ಅವೆಲ್ಲವೂ ಸರಿಯಾಗಿವೆ. ಇನ್ಮುಂದೆ ಧಾರಾವಾಹಿ ಮುಗಿಯುವವರೆಗೂ ನಾನು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದಲ್ಲಿ ನಟಿಸುತ್ತೇನೆ. ಆರೂರು ಜಗದೀಶ್, ವಾಹಿನಿಗೆ, ಜೊತೆ ಜೊತೆಯಲಿ ಕುಟುಂಬಕ್ಕೆ ಚಿರಋಣಿಯಾಗಿರುವೆ. ಪ್ರೇಕ್ಷಕರಿಗೆ ಈ ವಿಷಯದಲ್ಲಿ ಆತಂಕ ಆಗಿತ್ತು. ಹೀಗಾಗಿ ನಾನು ಕ್ಷಮೆ ಕೇಳುವೆ. ಹೀಗೆಯೇ ನಮಗೆ ಪ್ರೀತಿಕೊಡಿ. ಜೊತೆ ಜೊತೆಯಲಿ ಧಾರಾವಾಹಿ ನನಗೆ ತುಂಬ ಕೊಟ್ಟಿದೆ. ನನ್ನ ಬೆಳವಣಿಗೆಗೆ ನಿಮ್ಮ ಪ್ರೀತಿ ತುಂಬ ಮುಖ್ಯ” ಎಂದು ಮೇಘಾ ಶೆಟ್ಟಿ ಹೇಳಿಕೊಂಡಿದ್ದಾರೆ.

  • ಮೇಘಾ ಶೆಟ್ಟಿ ಪ್ರಸ್ತುತ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ‘ತ್ರಿಬ್ಬಲ್ ರೈಡಿಂಗ್’ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಅವರು ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಧಾರಾವಾಹಿಗೆ ಸಮಯ ಕೊಡಲು ಆಗೋದಿಲ್ಲ ಎಂದು ಧಾರಾವಾಹಿ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇನ್ನು ಅವರಿಗೆ ಬೇರೆ ಬೇರೆ ಸಿನಿಮಾ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆಯಂತೆ.
    ‘ಜೊತೆ ಜೊತೆಯಲಿ’ ಧಾರಾವಾಹಿ ಕನ್ನಡದ ಟಾಪ್ 5 ಧಾರಾವಾಹಿಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಈ ಸೀರಿಯಲ್ ಟಿಆರ್‌ಪಿ ವಿಚಾರದಲ್ಲಿ ದಾಖಲೆ ಮಾಡಿತ್ತು. ನಟಿ ಅನು ಸಿರಿಮನೆ ಪಾತ್ರಕ್ಕೆ ಜೀವ ತುಂಬುತ್ತಿರುವ ಮೇಘಾರಿಗೆ ಒಳ್ಳೆಯ ಮೆಚ್ಚುಗೆ ಕೂಡ ಸಿಕ್ಕಿತ್ತು. ಇದೇ ಅವರ ಮೊದಲ ಧಾರಾವಾಹಿಯಾಗಿದೆ.
    ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೇಘಾ ಶೆಟ್ಟಿ ಸಿಕ್ಕಾಪಟ್ಟೆ ಫೋಟೋಶೂಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಫಿಟ್‌ನೆಸ್ ಕಡೆಗೆ ಅವರು ಸಿಕ್ಕಾಪಟ್ಟೆ ಗಮನ ನೀಡುತ್ತಿದ್ದು, ಯೋಗ, ವ್ಯಾಯಾಮಗಳ ವಿಡಿಯೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ಅದರ ಜೊತೆಗೆ ಅಭಿಮಾನಿಗಳ ಜೊತೆಗೆ ಸಂವಹನ ಕೂಡ ನಡೆಸುತ್ತಿರುತ್ತಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...