ಸಂತ ಶಿಶುನಾಳ ಶರೀಫ ಚಿತ್ರದಲ್ಲಿ ಮನೋಜ್ಞ ಅಭಿನಯ ಹಾಗೂ ಯಯಾತಿ ನಾಟಕದ ಮೂಲಕ ದೇಶಾದ್ಯಂತ ಮನೆ ಮಾತಾಗಿದ್ದ ಜ್ಞಾನಪೀಠ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ಸಾಹಿತಿ, ಬರಹಗಾರ, ಚಿಂತಕ, ಹಾಗೂ ಬಹುಮುಖ ಪ್ರತಿಭೆ, ನಿರ್ದೇಶಕ ಡಾ.ಗಿರೀಶ್ ಕಾರ್ನಾಡ್(81) ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ.
ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಗಿರೀಶ್ ಕಾರ್ನಾಡ್ ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ಯಾವುದೇ ಸಕಲ ಸರ್ಕಾರಿ ಗೌರವಗಳಿಲ್ಲದೆ, ಸರಳವಾಗಿ ನೆರವೇರಲಿದೆ. ಕಾರ್ನಾಡ್ ಅವರು, ಪತ್ನಿ, ಪುತ್ರ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಬಂಧು-ವರ್ಗವನ್ನು ಅಗಲಿದ್ದಾರೆ.