No menu items!
9.6 C
Munich
Tuesday, April 21, 2026

ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ವಿದ್ಯುತ್ ಚಿತಾಗಾರದಲ್ಲಿ ಗಿರೀಶ್ ಕಾರ್ನಾಡ್ ಅಂತ್ಯಸಂಸ್ಕಾರ !

Must read

ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ಅಂತ್ಯಸಂಸ್ಕಾರ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ, ಸರಳವಾಗಿ ನೆರವೇರಲಿದೆ.

ಅವರ ಅಂತ್ಯಸಂಸ್ಕಾರವನ್ನು ಗಿರೀಶ್ ಕಾರ್ನಾಡ್‍ರ ಇಚ್ಛೆಯಂತೆ ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸದೆ ಸರಳವಾಗಿ ನೆರವೇರಿಸಲಾಗುವುದು. ಸಾರ್ವಜನಿಕರ ದರ್ಶನಕ್ಕೂ ಅವಕಾಶ ಇರುವುದಿಲ್ಲ ಎಂದು ಕಾರ್ನಾಡ್ ಅವರ ಆಪ್ತರಾದ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

ನಾನು ಇಹಲೋಕ ತ್ಯಜಿಸಿದ ನಂತರ ಯಾವುದೇ ರೀತಿಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸದೆ ಅಂತ್ಯಸಂಸ್ಕಾರವನ್ನು ನಡೆಸಬೇಕೆಂದು ತಮ್ಮ ಮಗನ ಬಳಿ ಕೇಳಿಕೊಂಡಿದ್ದರು.

ಹೀಗಾಗಿ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನೆರವೇರಿಸುತ್ತಿದ್ದೇವೆ.ಬೈಯ್ಯಪ್ಪನಹಳ್ಳಿ ಬಳಿ ಇರುವ ಕಲ್ಪಳ್ಳಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದ್ದು, ಅವರ ಅಂತಿಮ ದರ್ಶನ ಪಡೆಯಲು ಇಚ್ಛಿಸುವವರು ಅಲ್ಲಿಗೇ ಬಂದು ಪಡೆಯಬೇಕು ಅವರು ಮನವಿ ಮಾಡಿದ್ದಾರೆ.

ಸರ್ಕಾರಿ ಗೌರವಗಳು ಇದ್ಯಾವುದೂ ನಮಗೆ ಬೇಡ ಎಂದು ಹೇಳಿದ್ದರು. ಹಾಗಾಗಿ ಅವರ ಇಷ್ಟದಂತೆಯೇ ನೆರವೇರಿಸುತ್ತಿದ್ದೇವೆ. ಅವರ ಅಭಿಮಾನಿಗಳು, ಹಿತೈಷಿಗಳು, ಒಡನಾಡಿಗಳು, ರಾಜಕಾರಣಿಗಳು ಯಾರೇ ಆಗಲಿ ಚಿತಾಗಾರಕ್ಕೆ ಬರುವಂತೆ ಕೋರಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article