ಜ್ಯೂನಿಯರ್ ರೆಬಲ್ ಸ್ಟಾರ್ ಗೆ ಕರುನಾಡ ಕಿಚ್ಚನ ಶುಭಾಶಯ..!!
ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿನಯದ ಸಿನಿಮಾ ‘ಅಮರ್‘.. ಇದೇ ಮೊದಲ ಬಾರಿಗೆ ನಾಯಕನಾಗಿ ಆಗಮಿಸುತ್ತಿರುವ ಅಭಿಗೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತಿದೆ.. ಹೀಗಾಗೆ ಅಮರ್ ಚಿತ್ರದ ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳಿವೆ.. ಇನ್ನೂ ನಿಮ್ಮ ನಿರೀಕ್ಷೆಯನ್ನ ಹೆಚ್ಚಿಸಲು ಪ್ರೇಮಿಗಳ ದಿನದಂದು ಚಿತ್ರದ ಮೊದಲ ಟೀಸರ್ ರಿಲೀಸ್ ಆಗಲಿದೆ..
ಹೀಗಾಗೆ ಕಿಚ್ಚ ಸುದೀಪ್ ಕೂಡ ಟ್ವಿಟ್ ಮೂಲಕ ಅಭಿ ಮೊದಲ ಚಿತ್ರಕ್ಕೆ ಶುಭಾಯಶ ತಿಳಿಸಿದ್ದಾರೆ.. ಟೀಸರ್ ರಿಲೀಸ್ ಆಗ್ತಿರೋ ಪೋಸ್ಟರ್ ಪೋಸ್ಟ್ ಮಾಡಿ, ಯಂಗ್ ರೆಬಲ್ ಸ್ಟಾರ್ ನ ತುಂಬು ಮನಸ್ಸಿನಿಂದ ಸ್ವಾಗತಿಸುತ್ತಿದ್ದಾರೆ.. ಒಟ್ಟಿನಲ್ಲಿ ಪ್ರೇಮಿಗಳ ದಿನಕ್ಕೆ ಅಭಿಷೇಕ್ ಪ್ರೇಮಿಗಳಿಗೆ ಹೊಸ ಗಿಫ್ಟ್ ನೀಡಲ್ಲಿದ್ದಾರೆ..