ಜ್ಯೂ.ಚಿರು ಮೇಲೂ ಪ್ರೀತಿ ತೋರಿ ಎಂದು ಧ್ರುವಾ ಮನವಿ

Date:

ಬಹುನಿರೀಕ್ಷಿತ ‘ಪೊಗರು’ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಕಾರ್ಯಕ್ರಮ ದಾವಣಗೆರೆಯಲ್ಲಿ ಫೆ.14ರಂದು ಅದ್ದೂರಿಯಾಗಿ ನೆರವೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಆಗಮಿಸಿ, ಪೊಗರು ತಂಡಕ್ಕೆ ಹಾರೈಸಿದ್ದಾರೆ. ನಟ ಅರ್ಜುನ್‌ ಸರ್ಜಾ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ರುವ ಸರ್ಜಾಗೆ ಆಶೀರ್ವದಿಸಿದ್ದಾರೆ. ಇದೇ ವೇಳೆ ಮಾತನಾಡಿದ ನಟ ಧ್ರುವ, ‘ನಮ್ಮ ಮೇಲೆ ನೀವು ತೋರಿದ ಪ್ರೀತಿಯನ್ನ ನಮ್ಮ ಜ್ಯೂನಿಯರ್ ಚಿರು ಮೇಲೂ ತೋರಿಸಿ..’ ಎಂದು ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ.

‘ಫೆ.19ರಂದು ಸಿನಿಮಾ ರಿಲೀಸ್ ಆಗುತ್ತಿದೆ. ದಯವಿಟ್ಟು ನೀವೆಲ್ಲರೂ ಬಂದು ಸಿನಿಮಾ ನೋಡಿ. ನನ್ನ ಬದುಕಿನಲ್ಲಿ ಏನೇ ನಡೆದರೂ, ಮೊದಲು ನನ್ನ ಅಣ್ಣ ಚಿರಂಜೀವಿ ಸರ್ಜಾ ಜೊತೆಗೆ ಹಂಚಿಕೊಳ್ಳುತ್ತಿದ್ದೆ. ನಮ್ಮಣ್ಣನ ಸ್ಥಾನದಲ್ಲಿ ಯಾರು ಇರುವುದಕ್ಕೆ ಆಗುವುದಿಲ್ಲ. ನಮ್ಮ ಮೇಲೆ ನೀವು ತೋರಿದ ಪ್ರೀತಿಯನ್ನು ನಮ್ಮ ಜ್ಯೂನಿಯರ್ ಚಿರು ಮೇಲೂ ತೋರಿಸಿ.. ಅವನಿಗೂ ಆಶೀರ್ವಾದ ಮಾಡಿ.. ನಮ್ಮ ಅಣ್ಣ ಚಿರು ನಟಿಸಿರುವ ರಾಜಮಾರ್ತಂಡ ಸಿನಿಮಾದ ಟ್ರೇಲರ್ ನನ್ನ ಸಿನಿಮಾದ ಜೊತೆಗೆ ರಿಲೀಸ್ ಆಗ್ತಾ ಇದೆ. ನನ್ನ ಸಿನಿಮಾ ನೋಡಿಲ್ಲ ಎಂದರೂ ಪರವಾಗಿಲ್ಲ, ನಮ್ಮಣ್ಣನ ಸಿನಿಮಾ ನೋಡಿ ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ ಧ್ರುವ.

‘ನಿಮ್ಮೆಲ್ಲರ ಪ್ರೀತಿ ಇಡೀ ಚಿತ್ರರಂಗದ ಮೇಲೆ ಇರಲಿ. ‘ನಾನು ಅವರ ಫ್ಯಾನ್.. ಇವರ ಫ್ಯಾನ್..’ ಅನ್ನೋದನ್ನೆಲ್ಲ ಬಿಟ್ಟು ಕನ್ನಡ ಚಿತ್ರರಂಗದ ಫ್ಯಾನ್ ಎಂದುಕೊಂಡು, ಕನ್ನಡ ಸಿನಿಮಾಗಳನ್ನು ನೋಡಿ. ಇನ್ಸ್‌ಪೆಕ್ಟರ್ ವಿಕ್ರಂ, ಶ್ಯಾಡೋ ಇದೆ. ಆಮೇಲೆ ಪೊಗರು ಬರ್ತಾ ಇದೆ. ನಂತರ ರಾಬರ್ಟ್, ಯುವರತ್ನ, ಸಲಗ, ಭಜರಂಗಿ 2, ಕೆಜಿಎಫ್ 2, ಗಾಳಿಪಟ 2 ಇದೆ. ಎಲ್ಲ ಸಿನಿಮಾಗಳನ್ನು ನೋಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ ನಟ ಧ್ರುವ ಸರ್ಜಾ.

‘ನಾನು ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಕಾರ್ಯಕ್ರಮ ಮಾಡಬೇಕು ಎಂದುಕೊಂಡಿದ್ದೆ. ನನ್ನ ಸಿನಿಮಾಗಳು ಉತ್ತರ ಕರ್ನಾಟಕದಲ್ಲಿ ಚೆನ್ನಾಗಿ ಪ್ರದರ್ಶನ ಕಂಡಿವೆ. ಹಾಗಾಗಿ, ಹಠ ಮಾಡಿ ಇಲ್ಲಿಯೇ ಕಾರ್ಯಕ್ರಮ ಮಾಡಿಸಿಕೊಂಡಿದ್ದೇನೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಧ್ರುವ ಸರ್ಜಾ.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...