No menu items!
13.4 C
Munich
Sunday, April 19, 2026

ಎಲ್ ಪಿಜಿ ಸಿಲೆಂಡರ್ ಬೆಲೆ ಏರಿಕೆ – ಗ್ರಾಹಕರಿಗೆ ಬಿಗ್ ಶಾಕ್

Must read

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಶತಕ ಸಮೀಪಿಸುತ್ತಿರುವ ನಡುವೆಯೇ, ಜನತೆಗೆ ಎಲ್‌ಪಿಜಿ ಸಿಲಿಂಡರ್‌ ದರ ಏರಿಕೆ ಬಿಸಿಯೂ ತಟ್ಟಿದೆ. ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಭಾನುವಾರ 50 ರೂ. ಹೆಚ್ಚಿಸಲಾಗಿದೆ. ಸೋಮವಾರದಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಇದರೊಂದಿಗೆ ಬೆಂಗಳೂರಿನಲ್ಲಿ ಸಬ್ಸಿಡಿ ರಹಿತ 14.2 ಕೆ.ಜಿ. ಸಿಲಿಂಡರ್‌ ದರ 772 ರೂ.ಗೆ ತಲುಪಿದೆ. ಕಳೆದ ಡಿಸೆಂಬರ್‌ನಿಂದ ಈಚೆಗೆ ಸಿಲಿಂಡರ್‌ ದರದಲ್ಲಿ ಮೂರು ಬಾರಿ ಹೆಚ್ಚಳ ಮಾಡಲಾಗಿದೆ. ಇತ್ತೀಚೆಗಷ್ಟೇ 25 ರೂ. ದುಬಾರಿಯಾಗಿತ್ತು. ಸರಕಾರವು ಗ್ರಾಹಕರಿಗೆ ಸಬ್ಸಿಡಿ ಹಣದ ನೇರ ವರ್ಗಾವಣೆ ನಿಲ್ಲಿಸಿರುವ ಹಿನ್ನೆಲೆಯಲ್ಲಿ ಪೂರ್ಣ ಹೊರೆಯನ್ನು ಗ್ರಾಹಕರೇ ಭರಿಸಬೇಕಾಗಿದೆ. ಇನ್ನು ದಿಲ್ಲಿಯಲ್ಲಿ 14.2 ಕೆಜಿ ಗ್ಯಾಸ್‌ ಸಿಲಿಂಡರ್‌ಗೆ ಗ್ರಾಹಕರು 769 ರೂ. ನೀಡಬೇಕಿದೆ.

ಇನ್ನೊಂದೆಡೆ ಹಲವು ಪ್ರಮುಖ ನಗರಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಭಾರಿ ಏರಿಕೆ ಕಾಣುತ್ತಿದೆ. ಸದ್ಯ ಪೆಟ್ರೋಲ್‌ ದರ ಪ್ರಮುಖ ನಗರಗಳಲ್ಲಿ 90ರ ಗಡಿ ದಾಟಿದೆ. ಇದು ಜನ ಸಾಮಾನ್ಯರ ಜೇಬು ಸುಡುವಂತೆ ಮಾಡಿದೆ. ಇದೀಗ ಜನರಿಗೆ ಅತ್ಯವಶ್ಯಕವಾಗಿರುವ ಎಲ್‌ಪಿಜಿ ಬೆಲೆ ಕೂಡ ಭಾರೀ ಏರಿಕೆ ಕಂಡಿದೆ.


ರಾಶಿಚಕ್ರದಲ್ಲಿ 12 ರಾಶಿಗಳಿವೆ. ಮತ್ತು ಪ್ರತಿಯೊಬ್ಬ ವ್ಯಕ್ತಿಯು ಈ ರಾಶಿಯನ್ನು ಪ್ರತಿನಿಧಿಸುತ್ತಾನೆ. ರಾಶಿಚಕ್ರದಲ್ಲಿ ನಡೆಯುವ ಬದಲಾವಣೆಗಳ ಮೂಲಕ ಆ ವ್ಯಕ್ತಿಯ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ಕಂಡುಹಿಡಿಯಬಹುದು. ಧರ್ಮ, ದೇವರು ಬಗ್ಗೆ ಹೇಳೋದು ಬಿಟ್ಟು ರಾಶಿ ಬಗ್ಗೆ ಹೇಳುತ್ತಿದ್ದರಲ್ಲಾ ಅಂತಾ ಯೋಚನೆ ಮಾಡ್ತಾ ಇದ್ದೀರಾ..? ಹೌದು, ನಾವಿವತ್ತು ಶಿವನೊಂದಿಗೆ ಸಂಬಂಧ ಹೊಂದಿದ ಎರಡು ರಾಶಿಗಳ ಬಗ್ಗೆ ಹೇಳಲಿದ್ದೇವೆ. ಆ ಎರಡು ರಾಶಿಗಳಾವುವು..? ಶಿವನಿಗೂ ಈ ರಾಶಿಗಳಿಗೂ ಸಂಬಂಧವೇನು..? ನಿಮ್ಮ ರಾಶಿಯೂ ಇರಬಹುದು.
ಭಗವಾನ್‌ ಶಿವನನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ದೇವರುಗಳಲ್ಲಿ ಒಬ್ಬನು ಎಂದು ಪರಿಗಣಿಸಲಾಗುತ್ತದೆ. ಶಿವನನ್ನು ಬ್ರಹ್ಮಾಂಡದ ಸೃಷ್ಟಿಕರ್ತ ಎಂದೂ ಕರೆಯುತ್ತಾರೆ. ಮತ್ತು ಇವನನ್ನು ದೇವರುಗಳ ದೇವರು ಮಹಾದೇವ ಎಂದೂ ಕರೆಯುತ್ತಾರೆ. ಒಮ್ಮೆ ಮಹಾದೇವ ತನ್ನ ಯಾವುದೇ ಭಕ್ತರ ಬಗ್ಗೆ ಸಂತಸಗೊಂಡರೆ, ಅವನ ಜೀವನದ ದೌರ್ಭಾಗ್ಯವನ್ನೂ ಅದೃಷ್ಟವನ್ನಾಗಿ ಬದಲಾಯಿಸುತ್ತಾನೆ. ಮತ್ತೊಂದೆಡೆ, ನಾವು ರಾಶಿಚಕ್ರ ಚಿಹ್ನೆಗಳ ಬಗ್ಗೆ ಮಾತನಾಡಿದರೆ, ಜ್ಯೋತಿಷ್ಯದಲ್ಲಿ ಸುಮಾರು 12 ರಾಶಿಚಕ್ರ ಚಿಹ್ನೆಗಳು ಇವೆ. ಮತ್ತು ಈ ರಾಶಿಚಕ್ರ ಚಿಹ್ನೆಗಳು ಮತ್ತು ಗ್ರಹಗಳು ಜನರ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಮತ್ತು ಶಿವನ ಆಶೀರ್ವಾದದಿಂದ ಈ ಎರಡು ರಾಶಿಗಳ ಜೀವನವು ಸಮೃದ್ಧಿಯುತವಾಗಿರುತ್ತದೆ. ಶಿವನ ಆಶೀರ್ವಾದ ಹೊಂದಿದ ರಾಶಿಗಳಿವು..
ಶಿವನು ಇಷ್ಟ ಪಡುವ, ಶಿವನು ಸಮೃದ್ಧಿಯನ್ನು ಕರುಣಿಸುವ ರಾಶಿಚಕ್ರ ಚಿಹ್ನೆಯೆಂದರೆ ಅದುವೇ ತುಲಾ ರಾಶಿ. ಅಂದಹಾಗೆ, ತುಲಾ ರಾಶಿಚಕ್ರದ ಅಧಿಪತಿ ಶುಕ್ರ. ಈ ರಾಶಿಚಕ್ರ ಚಿಹ್ನೆಯಲ್ಲಿ ಜನಿಸಿದವರು ಬೇರೆ ಯಾವುದೇ ಗ್ರಹದ ಮೇಲೆ ಯಾವುದೇ ಕೆಟ್ಟ ಪರಿಣಾಮವನ್ನು ಬೀರುವುದಿಲ್ಲ. ಮತ್ತು ಈ ರಾಶಿಚಕ್ರ ಚಿಹ್ನೆಯ ಜನರನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಜನರು ಎಂದು ಪರಿಗಣಿಸಲಾಗುತ್ತದೆ. ಶಿವನು ಸ್ವತಃ ತುಲಾ ರಾಶಿಯವರಿಗೆ ಎಲ್ಲಾ ಕಷ್ಟದ ಪರಿಸ್ಥಿತಿಗಳಲ್ಲೂ ಸಹಾಯ ಮಾಡುತ್ತಾನೆ. ತುಲಾ ರಾಶಿಯವರು ಶಿವನನ್ನು ಭಕ್ತಿಯಿಂದ ಬೇಡಿಕೊಂಡರೆ ಸಾಕು, ಅವರ ಎಲ್ಲಾ ಕಷ್ಟಗಳನ್ನು ದೂರಾಗಿಸುತ್ತಾನೆ.
ಶಿವನ ಆಶೀರ್ವಾದವನ್ನು ಪಡೆದಿರುವ ತುಲಾ ರಾಶಿಯವರು ಶಿವನ ವಿಶೇಷ ಭಕ್ತರಾಗಿರುತ್ತಾರೆ. ತುಲಾ ರಾಶಿಯವರು ಶಿವನನ್ನು ಪೂಜಿಸುವುದರಿಂದ, ಆತನ ಮಂತ್ರಗಳನ್ನು ಪಠಿಸುವುದರಿಂದ ಶಿವನ ಸಂಪೂರ್ಣ ಆಶೀರ್ವಾದವನ್ನು ಪಡೆದುಕೊಳ್ಳಬಹುದು.
ಶಿವನ ನೆಚ್ಚಿನ ಎರಡನೇ ರಾಶಿಯೆಂದರೆ ಅದುವೇ ಕುಂಭ ರಾಶಿ. ಶಿವನ ಅನುಗ್ರಹವು ಯಾವಾಗಲೂ ಕುಂಭ ರಾಶಿಯ ಜನರ ಮೇಲೆ ಇರುತ್ತದೆ. ಭಗವಾನ್‌ ಪರಶಿವನ ಆಶೀರ್ವಾದದಿಂದ ಈ ರಾಶಿಚಕ್ರ ಜನರ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಯೂ ಇರುವುದಿಲ್ಲ. ಮತ್ತು ಈ ರಾಶಿಚಕ್ರದ ಸ್ಥಳೀಯರು ಯಾವಾಗಲೂ ಸಂತೋಷವನ್ನು ಮಾತ್ರ ಪಡೆಯುತ್ತಾರೆ. ಜಗತ್ತಿನಲ್ಲಿ, ಕುಂಭ ರಾಶಿಯ ಜನರನ್ನು ಅತ್ಯಂತ ಶಕ್ತಿಶಾಲಿ ಜನರು ಎಂದು ಪರಿಗಣಿಸಲಾಗುತ್ತದೆ.
ಇತರ ರಾಶಿಚಕ್ರಗಳ ಜೀವನದಲ್ಲಿ ಎಂದಿಗೂ ಸಂತೋಷವಿರುವುದಿಲ್ಲ ಎಂಬುದು ಇದರ ಅರ್ಥವಲ್ಲ, ಆದರೆ ಈ ರಾಶಿಚಕ್ರಗಳ ಸ್ಥಳೀಯರು ಮಹಾದೇವನ ವಿಶೇಷ ಅನುಗ್ರಹವನ್ನು ಹೊಂದಿರುವುದರಿಂದ ಯಾವಾಗಲೂ ಜೀವನದಲ್ಲಿ ಸಂತೋಷವಾಗಿರುತ್ತಾರೆ. ಮತ್ತು ಅವರಿಗೆ ಯಾವಾಗಲೂ ಮಂಗಳಕರವಾದುದ್ದನ್ನು ಕರುಣಿಸುತ್ತಿರುತ್ತಾನೆ.
ನೋಡಿದರಲ್ಲಾ..? ಯಾವ ರಾಶಿಗಳೆಂದರೆ ಭಗವಾನ್‌ ಶಿವನಿಗೆ ಅತ್ಯಂತ ಪ್ರಿಯವೆಂದು. ಶಿವನು ಕೇವಲ ಈ ರಾಶಿಯವರನ್ನು ಮಾತ್ರವಲ್ಲ, ರಾಶಿಚಕ್ರದ ಎಲ್ಲಾ ರಾಶಿಯವರ ಮೇಲೆ ತನ್ನ ಅನುಗ್ರಹವನ್ನು ತೋರುತ್ತಾನೆ. ಆದರೆ, ಈ ಎರಡೂ ರಾಶಿಗಳ ಮೇಲೆ ಸ್ವಲ್ಪ ವಿಶೇಷವಾದ ಅನುಗ್ರಹವನ್ನು ನೀಡುತ್ತಾನೆ ಎನ್ನುವುದೇ ಈ ಲೇಖನದ ಅರ್ಥ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article