ರೆಹಮಾನ್ ಹಾಸನ್….ಟಿವಿ9 ರೆಹಮಾನ್, ಬಿಗ್ ಬಾಸ್ ಖ್ಯಾತಿಯ ಜನಮೆಚ್ಚಿದ ಮನೆಮಗ ಬಿಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ರೆಹಮಾನ್ ಟಿವಿ9 ಮೂಲಕ ಮನೆಮಾತದ ಜನಪ್ರಿಯ ನಿರೂಪಕ. ಟಿವಿ9 ನಲ್ಲಿರುವಾಗ ಬಿಗ್ ಬಾಸ್ ಆಫರ್ ಬಂದಿದ್ದರಿಂದ ಒಂದು ಚೇಂಜ್ ಇರಲಿ ಅಂತ ಬಿಗ್ ಬಾಸ್ ಗೆ ಹೋದ ರೆಹಮಾನ್ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿ ಆದರು. ಈಗ ಅವರು ನಾಯಕ ನಟನಾಗಿ ಅಭಿನಯಿಸಿರುವ ‘ಗರ’ ಸಿನಿಮಾ ರಿಲೀಸ್ ಆಗುತ್ತಿದೆ. ರೆಹಮಾನ್ ಈ ನಡುವೆ ಬಿಟಿವಿಯಲ್ಲಿ ನ್ಯೂಸ್ ಓದಿದ್ದಾರೆ. ರೆಹಮಾನ್ ಅವರು ಗರ ಸಿನಿಮಾದ ಡಿಫ್ರೆಂಟ್ ಪ್ರಮೋಷನ್ ಗಾಗಿ ಮತ್ತೆ ಸುದ್ದಿ ವಾಚನ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಹುಶಃ ಸದ್ಯದ ಮಟ್ಟಿಗೆ ಅವರು ಸಿನಿಮಾ ಬಿಟ್ಟು ಮತ್ತೆ ಫುಲ್ ಟೈಮ್ ಪತ್ರಕರ್ತರಾಗಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಕ್ಕೆ ವಾಪಸ್ ಆಗೋ ಇಂಗಿತವಂತೂ ಅವರ ಮನದಲ್ಲಿ ಭದ್ರವಾಗಿದೆ. ಕಾದುನೋಡೋಣ…ರೆಹಮಾನ್ ಬಿಟಿವಿ ಸೇರಿದ್ರಾ? ಅಥವಾ ಗರ ಪ್ರಮೋಷನ್ ಗೋ ಅಂತ…ಸದ್ಯಕ್ಕೆ ರೆಹಮಾನ್ ಬಿಟಿವಿ ಪರದೆಯಲ್ಲಿ ಕಾಣಿಸಿಕೊಂಡಿರುವುದು ಬ್ರೇಕಿಂಗ್ ನ್ಯೂಸ್..!
ಟಿವಿ9 ರೆಹಮಾನ್ ಬಿಟಿವಿಯಲ್ಲಿ..! ಇದು ಬಿಗ್ ಬ್ರೇಕಿಂಗ್ ನ್ಯೂಸ್
Date: