ಸಿನಿಮಾ ಮಾಡುವುದನ್ನು ಬಿಟ್ಟರೆ ಅವರಿಗೆ ರೈತರ ಕಷ್ಟ ಏನು ಗೊತ್ತಿದೆ !? ದರ್ಶನ್ ಗೆ ಹೆಚ್.ಡಿ. ರೇವಣ್ಣ ಟಾಂಗ್ !

Must read

ರೈತರ ಸಾಲ ಮನ್ನಾ ಮಾಡುವ ಬದಲು ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಲಿ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ಹೇಳಿದ್ದರು.

ಈ ಹೇಳಿಕೆಗೆ ಸಚಿವ ಹೆಚ್.ಡಿ. ರೇವಣ್ಣ ಪ್ರತಿಕ್ರಿಯೆ ನೀಡಿ, ಆ ನಟರಿಗೆ ರೈತರ ಬಗ್ಗೆ ಏನು ಗೊತ್ತು ಎಂದು ಪ್ರಶ್ನಿಸಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ಸಿನಿಮಾ ಮಾಡುವುದನ್ನು ಬಿಟ್ಟರೆ ಅವರಿಗೆ ರೈತರ ಕಷ್ಟ ಏನು ಗೊತ್ತಿದೆ. 6 ತಿಂಗಳು ಸಿನಿಮಾ ಮಾಡುವುದನ್ನು ಬಿಟ್ಟು ರೈತರ ಕಷ್ಟವನ್ನು ಅಧ್ಯಯನ ಮಾಡಲಿ. ರೈತರು ಸಾಲ ಮಾಡಿ ಕಷ್ಟದಲ್ಲಿದ್ದಾರೆ. ಅವರ ಕಷ್ಟವನ್ನು ಅರಿಯಲಿ ಎಂದು ಹೇಳಿದ್ದಾರೆ.

ರೈತರ ಸಾಲ ಮನ್ನಾ ಬಗ್ಗೆ ಮಾತನಾಡುವ ನಟ ಒಂದು ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆಯಲ್ಲಿ ಅರ್ಧದಷ್ಟನ್ನು ರೈತರ ಸಾಲ ತೀರಿಸಲು ಸರ್ಕಾರಕ್ಕೆ ಕೊಡಲಿ ಎಂದು ಹೇಳಿದ್ದಾರೆ.ಮಂಡ್ಯ ಚುನಾವಣೆಯ ವೇಳೆ 2 ಸಿನಿಮಾ ಫ್ರೀ ಮಾಡಿಕೊಡುವುದಾಗಿ ನಿರ್ಮಾಪಕರಿಂದ ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -spot_img

More articles

- Advertisement -spot_img

Latest article