ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸೀನ್ ಜಹಾನ್ ಅವರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಹಸೀನ್ ಜಹಾನ್ ಅವರು ಕಳೆದ ಅಮ್ರೋಹದಲ್ಲಿರುವ ಶಮಿ ಮನೆಗೆ ನುಗ್ಗಿ ಶಮಿ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. ಮಗಳು ಬೇಬೋ ಜೊತೆಗೆ ಶಮಿ ಮನೆಗೆ ಹೋದ ಜಹಾನ್ ಮನೆಯಲ್ಲಿ ಜಗಳವಾಡಿದ್ದಾರೆ. ಆಗ ಶಮಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ವಾರೆಂಟ್ ಅಗತ್ಯವಿಲ್ಲದೇ 151 ಸೆಕ್ಷನ್ ಅಡಿಯಲ್ಲಿ ಜಹಾನ್ ರನ್ನು ಬಂಧಿಸಿದ್ದಾರೆ.
ಶಮಿ ಪತ್ನಿಯಾಗಿದ್ದ ಹಸೀನಾ ಶಮಿಗೆ ಬೇರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಶಮಿ ಅವರ ಮನೆಯವರು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು ಎಂದು ಆರೋಪಿಸಿದರು.ಆದರೆ ಎಲ್ಲಾ ಆರೋಪಗಳನ್ನು ಅಲ್ಲಗೆಳೆದ ಮೊಹಮ್ಮದ್ ಶಮಿ ಕೋರ್ಟ್ ಸಮ್ಮುಖದಲ್ಲಿ ವಿಚ್ಚೇದನ ಪಡೆದಿದ್ದರು.