ಟೀಮ್ ಇಂಡಿಯಾಗೆ ಕನ್ನಡಿಗ ಮಯಾಂಕ್ ಬೇಡ ಎಂದ ಮಾಜಿ ಕ್ರಿಕೆಟಿಗ

0
47

ಕೊರೊನಾವೈರಸ್ ಕಾರಣದಿಂದಾಗಿ ಪ್ರಸ್ತುತ ಐಪಿಎಲ್ ಟೂರ್ನಿ ಮುಂದೂಡಲ್ಪಟ್ಟ ಬಳಿಕ ಇದೀಗ ಕ್ರೀಡಾಭಿಮಾನಿಗಳ ಚಿತ್ತ ಜೂನ್ 18ರಿಂದ ಇಂಗ್ಲೆಂಡ್‌ನಲ್ಲಿ ಶುರುವಾಗಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇನ್ನೂ ಹಲವು ಟೂರ್ನಿಗಳ ಮೇಲಿದೆ.

 

 

ಇಂಗ್ಲೆಂಡ್‌ನಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯಕ್ಕೆ ಬಿಸಿಸಿಐ ಈಗಾಗಲೇ ಬೃಹತ್ ತಂಡವನ್ನು ಪ್ರಕಟಿಸಿದ್ದು ಶುಬ್ಮನ್ ಗಿಲ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಯಾವ ಆಟಗಾರ ರೋಹಿತ್ ಶರ್ಮಾ ಜೊತೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಇಬ್ಬರಲ್ಲಿ ಯಾವ ಆಟಗಾರ ಆಡುವ ಬಳಗದಲ್ಲಿ ಸ್ಥಾನ ಪಡೆಯಬೇಕು ಎಂಬುದರ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

 

‘ಮಯಾಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಇಬ್ಬರ ಪೈಕಿ ಶುಬ್ಮನ್ ಗಿಲ್ ಅವರನ್ನು ಕಣಕ್ಕಿಳಿಸುವುದು ಉತ್ತಮ, ಕಳೆದ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಶುಬ್ಮನ್ ಗಿಲ್ ಹೇಳಿಕೊಳ್ಳುವಂತಹ ರನ್ ಕಲೆಹಾಕಿದ್ದರು ಸಹ ಆತನನ್ನು ತಂಡದಿಂದ ಕೈ ಬಿಡಬಾರದು ಏಕೆಂದರೆ ತಂಡದಲ್ಲಿ ನಿರಂತರತೆ ಮುಖ್ಯ, ಶುಬ್ಮನ್ ಗಿಲ್ ಬದಲು ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಿದರೆ ನಿರಂತರತೆ ಹಾಳಾಗುತ್ತದೆ ಹೀಗಾಗಿ ಅಗರ್ವಾಲ್ ಬದಲು ಶುಬ್ಮನ್ ಗಿಲ್‌ಗೆ ಅವಕಾಶ ನೀಡುವುದು ಉತ್ತಮ’ ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here