ಟೆನ್ನಿಸ್ ಅಂಗಳಕ್ಕೆ ಮರಳಿ ಬರಲಿದ್ದಾರೆ ಸಾನಿಯಾ ?

Date:

ಟೆನ್ನಿಸ್ ಲೋಕದ ತಾರೆ ಸಾನಿಯಾ ಮಿರ್ಜಾ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯಿಬ್‍ಮಲ್ಲಿಕ್‍ರನ್ನು ವರಿಸಿರುವ ಸಾನಿಯಾಮಿರ್ಜಾ ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದು ಟೆನ್ನಿಸ್ ರಂಗದಿಂದ ದೂರ ಸರಿದಿದ್ದರು.

ಸಾನಿಯಾ ಈಗ ಮತ್ತೆ ಟೆನ್ನಿಸ್ ಅಂಗಳಕ್ಕೆ ಮರಳಲು ದೇಹವನ್ನು ಸದೃಢಗೊಳಿಸಿಕೊಳ್ಳುವುದಕ್ಕಾಗಿ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸಾನಿಯಾಮಿರ್ಜಾ ಕಸರತ್ತು ಮಾಡುತ್ತಿರುವ ಜಿಮ್‍ನ ಟ್ರೈನರ್ ಇವರ ಫೋಟೋವನ್ನು ಇನ್ಸ್‍ಟಾಗ್ರಾಂನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಸಾನಿಯಾ ಮೊದಲಿಗಿಂತಲೂ ಹೆಚ್ಚು ಸದೃಢರಾಗುವತ್ತ ಹೆಜ್ಜೆ ಹಾಡಿದ್ದು ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದಕ್ಕೋಸ್ಕರ ಬಹಳ ಕಠಿಣವಾದ ವ್ಯಾಯಾಮವನ್ನು ಮಾಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.ತನ್ನ ತರಬೇತುದಾರ ಹಾಕಿರುವ ಫೋಟೋಗೆ ಪ್ರತಿಕ್ರಿಯಿಸಿರುವ ಸಾನಿಯಾ ಆ ಪೋಟೋದ ಕೆಳಗೆ ಹಾಸ್ಟಲ್ ಹಾರ್ಡರ್ ಎಂದು ಬರೆದಿದ್ದು ಶೀಘ್ರವೇ ಟೆನ್ನಿಸ್ ಅಂಗಳಕ್ಕೆ ಮರಳುವ ಸೂಚನೆಯನ್ನು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...