ಈ ಘಟನೆ ಉತ್ತರಪ್ರದೇಶದ ನಡೆದಿದ್ದು, ಗುಂಪೊಂದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲ್ಲಲು ಯತ್ನಿಸಿದ್ದಾರೆ. ಘಟನೆಯ ಸಿಸಿ ಟಿವಿ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಗೂಂಡಾಗಿರಿ ಪ್ರಕರಣ ಬಯಲಾಗಿದೆ ಈ ವಿಚಾರದಲ್ಲಿ ಪೋಲಿಸರು ಖಟಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ .
ಗುಂಪೊಂದು ಇಬ್ಬರು ಟೋಲ್ ಸಿಬ್ಬಂದಿ ಮೇಲೆ ನಿಷ್ಕರುಣೆಯಿಂದ ಹಲ್ಲೆ ನಡೆಸುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಅವರಲ್ಲೊಬ್ಬ ಕೆಂಪು ಬಣ್ಣದ ರೆನಾಲ್ಟ್ ಕ್ವಿಡ್ ಕಾರನ್ನು ಸಿಬ್ಬಂದಿ ಮೇಲೆ ಹಾಯಿಸಿದ್ದು, ಆ ನಂತರ ಎಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ .