ಟ್ಯಾಂಕರ್ ಡ್ರೈವರ್ ಮಿಸ್ಟರ್ ಏಷ್ಯಾ ಆಗಿದ್ಹೇಗೆ?

Date:

ಟ್ಯಾಂಕರ್ ಡ್ರೈವರ್ ಮಿಸ್ಟರ್ ಏಷ್ಯಾ ಆಗಿದ್ಹೇಗೆ?

ಇವರ ಹೆಸರು ಜಿ.ಬಾಲಕೃಷ್ಣ. ವಯಸ್ಸು 25, ಮೂಲತಃ ಬೆಂಗಳೂರಿನ ವೈಟ್‌ಫೀಲ್ಡ್‌ನವರು. ತಂದೆ ದಿವಂಗತ ಗೋಪಾಲ್‌. ಬಿಎಂಟಿಸಿ ಚಾಲಕರಾಗಿದ್ದರು. ತಾಯಿ ಪಾರ್ವತಮ್ಮ ತರಕಾರಿ ಬೆಳೆದು ಸಂಸಾರ ತೂಗಿಸುತ್ತಿದ್ದಾರೆ. ಸದ್ಯ ಬಾಲಕೃಷ್ಣ ಜೀವನ ನಿರ್ವಹಣೆಗಾಗಿ ನೀರಿನ ಟ್ಯಾಂಕರ್‌ ಇಟ್ಟುಕೊಂಡಿದ್ದಾರೆ. ಜತೆಗೆ ಜಿಮ್‌ ತರಬೇತಿ ಕೂಡ ನೀಡುತ್ತಿದ್ದಾರೆ.

ಹಾಲಿವುಡ್‌ ನಟ ಅರ್ನಾಲ್ಡ್‌ ಶ್ವಾಜನಗರ್‌ರಿಂದ ಪ್ರೇರಿತನಾಗಿದ್ದ ಅವರ ಬಲಿಷ್ಠ ಮೈಕಟ್ಟು ನೋಡಿ ದಂಗಾಗಿದ್ರು ಬಾಲಕೃಷ್ಣ. ಇದೇ ಪ್ರೇರಣೆಯಿಂದ ಜಿಮ್‌ನಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ರು. ಇನ್ನು ಕೇವಲ 14 ವರ್ಷ ವಯಸ್ಸು. ಅಲ್ಲಿಂದ ಶುರುವಾದ ಪಯಣ ಈಗ ಮಿಸ್ಟರ್ ಏಷ್ಯಾ ಆಗೋ ತನಕ ಬಂದು ನಿಂತಿದೆ.


ಮೊದಲು ವರ್ತೂರಿನ ಜಿಮ್‌ನಲ್ಲಿ ಆರಂಭಿಕ ಅಭ್ಯಾಸ ನಡೆಸಿದ್ರು ಬಾಲಕೃಷ್ಣ. ಇದೀಗ ವೈಟ್‌ ಫೀಲ್ಡ್‌ನಲ್ಲಿರುವ ಟೋಟಲ್‌ ಫಿಟೆಸ್‌ ಕೇಂದ್ರದಲ್ಲಿ ಅಭ್ಯಾಸ ನಡೆಸುತ್ತಿದ್ಧಾರೆ. ಜಿಮ್‌ ಮಾಲೀಕ ರಾಜೇಶ್‌ ಅವರ ಬೆಂಬಲವಾಗಿ ನಿಂತಿದ್ದಾರೆ ಎನ್ನುತ್ತಾರೆ ಬಾಲಕೃಷ್ಣ ಅವರು. ಇದುವರೆಗೆ ದೇಶ-ವಿದೇಶಗಳ ಒಟ್ಟು 90 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆ ಸೇರಿದಂತೆ ಒಟ್ಟು 90 ಪ್ರಶಸ್ತಿ ಗೆದಿದ್ದಾರೆ. 48 ಮುಕ್ತ ರಾಜ್ಯ ಮಟ್ಟದ ದೇಹದಾರ್ಢ್ಯ ಕೂಟದಲ್ಲಿ ಚಾಂಪಿಯನ್‌ ಆಗಿರುವುದು ಉಂಟು.
ಇನ್ನು, ಬಾಲಕೃಷ್ಣ ಅವರು, ನಾಲ್ಕು ಬಾರಿ ಮಿಸ್ಟರ್‌ ಕರ್ನಾಟಕ, 8 ಬಾರಿ ಮಿಸ್ಟರ್‌ ಇಂಡಿಯಾ ಕಿರಿಯರ ವಿಭಾಗ, 6 ಬಾರಿ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವರ ಈ ಸಾಧನೆ ಹಿಂದೆ ರಾಜ್ಯ ದೇಹದಾರ್ಢ್ಯ ಸಂಸ್ಥೆ ನೀಡಿದ ಪ್ರೋತ್ಸಾಹ ಕೂಡ ಇದೆ.
ಇಷ್ಟೆಲ್ಲಾ ದೇಹದಾರ್ಢ್ಯ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರೂ ಇವರಿಗೆ ಆರ್ಥಿಕ ಕೊರತೆ ಎದ್ದು ಕಾಣುತ್ತಿದೆ. ಬಾಡಿ ಬಿಲ್ಡಿಂಗ್‌ ಮಾಡುವುದಕ್ಕೆ ಸಾಕಷ್ಟು ಖರ್ಚು ಇದೆ. ಮುಂದೆ ಜರ್ಮನಿಯಲ್ಲಿ ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ. ಅಲ್ಲಿಗೆ ತೆರಳಲು ಆರ್ಥಿಕ ಸಮಸ್ಯೆ ಎದುರಾಗಿದೆ ಎನ್ನುವುದು ಅವರ ನೋವಿನ ಮಾತು.
ಒಟ್ಟಾರೆ, ಒಬ್ಬ ಸಾಮಾನ್ಯ ನೀರಿನ ಟ್ಯಾಂಕರ್ ಚಾಲಕ, ಇಂದು ದೇಹದಾರ್ಢ ಸ್ಪರ್ಧೇಯಲ್ಲಿ, ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡುವುದು ಸಾಮಾನ್ಯವಾದ ವಿಷಯವೇನಲ್ಲ. ಅದನ್ನು ಬಾಲಕೃಷ್ಣ ಅವರು ಮಾಡಿ ತೋರಿಸಿದ್ದಾರೆ. ಅಷ್ಟೇ ಅಲ್ಲ, ಅವರು ಇತರರಿಗೂ ಮಾದರಿಯಾಗಿದ್ದಾರೆ.

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...