ಸೂಪರ್ ಮಾಡೆಲ್ ಗಳು ಏನ್ ತಿಂತಾರೆ?

0
117

ನೀವು ಸೂಪರ್ ಮಾಡಲ್ ಗಳಾಗ್ಬೇಕು ಅಂತ ಕನಸು ಕಂಡಿದ್ದೀರಾ..?! ಹಾಗದ್ರೆ `ಅನ್ನ-ನೀರು’ ಬಿಡಿ..! ವಿಶ್ವದ ಬಹುತೇಕ ಸೂಪರ್ ಮಾಡೆಲ್ ಗಳು ಅನ್ನ ನೀರು ಬಿಟ್ಟೇ.. ಆ ಎತ್ತರಕ್ಕೆ ಏರಿರೋದಂತೆ..!
ಸೂಪರ್ ಮಾಡೆಲ್ ಗಳು ಅಂದ್ರೆ ಬರೀ ತೆಳ್ಳಗೆ ಸೊಂಟ ಬಳಕುವಂತಿರ್ಬೇಕು ಅಂತ ಅನ್ನೊಂಡಿದ್ದಾರೋ ಏನೋ..?! ಸಾಮಾನ್ಯರಂತೆಯೇ ಬೇಕಾಗಿದ್ದನ್ನು ತಿನ್ತಾ, ಹೊಟ್ಟೆಯನ್ನು ತಣ್ಣಗೆ ಇಟ್ಟುಕೊಳ್ಳೋ ಮಾಡೆಲ್ ಗಳೂ ಚೆನ್ನಾಗೇ ಇದ್ದಾರೆ..! ಅರೆ-ಬರೆ ತಿನ್ನೋ ಸೂಪರ್ ಮಾಡಲ್ ಗಳನ್ನು ನಿಮಗೆ ಪರಿಚಯ ಮಾಡಿಕೊಡೋ ಮೊದಲು ನಿಮಗೆ `ಕಾರ ಡೆಲ್ವಿಗ್ನೆ’ ಬಗ್ಗೆ ಹೇಳ್ತೀನಿ..!

SUPERMODEL-DIET-13

ಈ ಕಾರಾ ಡೆಲ್ವಿಗ್ ನೆ ಇಂಗ್ಲೀಷ್ ಸೂಪರ್ ಮಾಡೆಲ್. 23 ವರ್ಷದ ಈಕೆ ಮಾಡೆಲ್ ಆಗಿದ್ದರೂ ಸಾಮಾನ್ಯರಂತೇ ತಿನ್ತಾರೆ..! ಜಂಕ್ ಫುಡ್ ಅಂತೂ ಇವರಿಗೆ ಪಂಚಪ್ರಾಣ..! ಹೀಗೆ ನಮ್ಮಂತೆಯೇ ತಿನ್ನುವವರಾಗಿದ್ದರೂ ಇವತ್ತಿಗೂ “ಸೂಪರ್ ಮಾಡೆಲ್”..! ಅವರಂತೆಯೇ ತುಂಬಾ ಮಾಡಲ್ ಗಳು ಇದ್ದಾರೆ..! ಆದರೆ, ಕೆಲವರು ಮಾಡೆಲ್ ಕ್ಷೇತ್ರಕ್ಕೆ ಎಂಟ್ರಿ ಕೊಡೋಕೆ ಊಟವನ್ನೇ ಬಿಟ್ಟು ಬಿಡ್ತಾರೆ..!
ಇಲ್ಲಿ ವಿಶ್ವದ ಕೆಲವು ಸೂಪರ್ ಮಾಡೆಲ್ ಗಳನ್ನು, ಹಾಗೂ ಅವರು “ಹೊಟ್ಟೆಗೆ ಏನ್ ತಿನ್ತಾರೆ” ಅನ್ನೋದನ್ನು ಕೂಡ ಹೇಳ್ತೀನಿ. ನನಗಂತೂ ಹೊಟ್ಟೆಗೆ ಕಡಿಮೆ ತಿನ್ನೋ ಇವರುಗಳಿಗಿಂತ ಸಾಮನ್ಯರಂತೆ ತಿನ್ನೋ `ಕಾರ’ ಅವರೇ ಇಷ್ಟ ಆದ್ರೂ.. ಅವ್ರೇ ಚೆನ್ನಾಗಿದ್ದಾರೆ ಅನಿಸಿತು..! ಡಯೇಟ್ ಮಾಡೋ ಮಾಡೆಲ್ ಗಳನ್ನು ನೋಡಿದ್ರೆ ನಿಮಗೆ ಸೂಪರ್ ಆಗಿದ್ದಾರೆ ಅಂತ ಅನಿಸುತ್ತೋ ಬಿಡುತ್ತೋ ಗೊತ್ತಿಲ್ಲ..! ಆದರೆ ಅಯ್ಯೋ ಪಾಪ ಅಂತ ಅನಿಸಿಯೇ ಅನಿಸುತ್ತೆ..!

1. ಇಸಾಬೆಲ್ಲಾ ಕಾರೋ :
ದಿನಕ್ಕೆ 1 ಪೀಸ್ (ತುಂಡು) ಚಾಕೊಲೇಟ್, 1 ಕಪ್ ಟೀ

SUPERMODEL-DIET-3

2. ಅಡ್ರಿಯಾನಾ ಲಿಮಾ :
ದಿನಕ್ಕೆ 1 ಗ್ಯಾಲನ್ ನೀರು, ಕೇವಲ ಪ್ರೋಟಿನ್ ಶೇಕ್ಸ್, ಘನ ಆಹಾರ ಯಾವುದನ್ನೂ ತಿನ್ನೋದಿಲ್ಲ..! `ಶೋ’ ಗೆ 12 ಗಂಟೆ ಮೊದಲು ನೀರನ್ನೂ ಕುಡಿಯುವುದಿಲ್ಲ..! ನೀವೂ ಹೀಗೆ ಮಾಡಿ ನೋಡಣ..?!

SUPERMODEL-DIET-9

3. ಆಲಿಸ್ ಜಾಕ್ಸನ್ :

ಕೇವಲ ಒಂದೇ ಒಂದು `ಕೋಸ’ಲ್ಲಿ ಹೊಟ್ಟೆ ತುಂಬಿಸಿ ಕೊಳ್ತಾರೆ..! ಅಯ್ಯೋ ಪಾಪ, ದಿನಕ್ಕೆ ಒಂದೇ ಒಂದು ಕೋಸು ತಿಂದು ನನ್ನ ಹೊಟ್ಟೆ ತುಂಬಿದೆ ಅಂತ ಹೇಳೋರು ಯಾರಿದ್ದಾರೆ..?! ಇವರೊಬ್ಬರೇ..!

SUPERMODEL-DIET-8

4. ಓಪಿಲೆ ಗ್ಯುಲಿರ್ಮ್ಯಾಂಡ್ :
ಇವರು ಡಯೇಟ್ ಮಾಡ್ತರೆ. ದಿನದಲ್ಲಿ ಜ್ಯೂಸ್, ಹ್ಯೂಮಸ್, ತರಕಾರಿಗಳು, ಗ್ಯಾಜ್ಪೆಕೊವನ್ನು ಮಾತ್ರ ತಿನ್ತಾರೆ..! ಇವರ ಡಯೇಟ್ ಓಕೆ ಬಿಡಿ, ಈ ಪಟ್ಟಿ ಓದಿನೇ ನಮ್ ಹೊಟ್ಟೆ ತುಂಬ್ತು..!

SUPERMODEL-DIET-2

5. ಎಡಿ ಕ್ಯಾಂಪ್ಬೆಲ್ :

ಇವರ ದಿನದ ಡಯೇಟ್ ಅಂದ್ರೆ..? ಅಂಬಲಿ, ಸ್ಯಾಂಡ್ವಿಚ್, ಎಳನೀರು….! ಅಣ್ಣಾ.. ಬೇಗ ಬಿಲ್ ಕೊಡೊಣ್ಣ..!

SUPERMODEL-DIET-12

6. ಕ್ಯಾರೇಯ ಓಟಿಸ್ :
ಇವರ ದಿನದ ಆಹಾರ..ದಿನಕ್ಕೆ ಆರು ಲೋಟ ಬ್ಲಾಕ್ ಕಾಫಿ. ಕೆಲವೇ ಕೆಲವು ಪ್ಯಾಕ್ ಸಿಗರೇಟ್..! ಇಷ್ಟೇ..!

SUPERMODEL-DIET-6

7. ಬ್ರೀ ಮರ್ಫಿ :
ಹತ್ತಿಯ ಚೆಂಡನ್ನು ಜ್ಯೂಸ್ಗೆ ಅದ್ದಿ, ಸೇವಿಸ್ತಾರೆ.! ಅವರ ಅಮ್ಮ ಹೇಳ್ತಾರಂತೆ, ಜ್ಯೂಸ್ ಅನ್ನು ನೇರವಾಗಿ ಬಾಟಲ್ನಿಂದ ಕುಡಿಯೋದು ಅಸಹ್ಯ ಅಂತೆ ಸ್ವಾಮಿ..! ನೀವೂ ಇನ್ಮುಂದೆ ಹತ್ತಿ ಚೆಂಡನ್ನು ಜ್ಯೂಸಿಗೆ ಅದ್ದಿ, ಆಆಆಆಆ ಅಂತ ಬಾಯಿ ತೆರೆದು.. ಹತ್ತಿಚೆಂಡನ್ನು ಹಿಂಡಿ ಜ್ಯೂಸ್ ಅನ್ನು ಬಾಯಿಗೆ ಬಿಡ್ಕೊಳ್ಳಿ..! ಹಹಹಹಹಹಹ

SUPERMODEL-DIET-7

8. ಪ್ಲಸ್ ಸೈಜ್ :
ಇವರು ಕೆಲವು ಸಲ ಏನನ್ನೂ ತಿನ್ನಲ್ಲ..! ಸಾಮಾನ್ಯವಾಗಿ ಡಯೆಟ್ ಮಾತ್ರೆಗಳು, ಒಂದು ಬಿಸ್ಕೇಟ್..!

SUPERMODEL-DIET-5

 

9. ಕೆಂಡಾಲ್ ಜೆನ್ನರ್ :
ಇವರ ದಿನದ ಆಹಾರ, ಹಸಿ ತರಕಾರಿ, 12 ಲೋಟ ಡೆಟಾಕ್ಸ್ ಟೀ..!

SUPERMODEL-DIET-10

10. ಸುವಿ ರಿಗ್ಸ್ :
1 ಗ್ರಾನೋಲಾ ಬಾರ್, 1 ತರಕಾರಿ ಸೂಪ್, ಉಪ್ಪು ಮತ್ತು ವಿನಿಗರ್ ಚಿಪ್ಸ್, ಕಿತ್ತಳೆ ಜ್ಯೂಸ್ ಮತ್ತು ನೀರು ಇವರ ದಿನದ ಆಹಾರ..!

SUPERMODEL-DIET-4

11. ವಾಸಿಲಿಸಾ ಬೌಲ್ವಾ :
ಬ್ರೆಡ್ಡಿನ ಸುರುಳಿಯಂತೆ ಕಾಣೋ ಚೀಸ್(1), 2 ಐಸ್ಡ್ ಕಾಫಿ, 2 ಬಾಟಲಿ ನೀರು ಇವರ ದಿನದ ಆಹಾರ..!
ಜಾಣ ಹುಡುಗಿ

SUPERMODEL-DIET-1

12. ಕ್ಲಿಯೋ ಗ್ಲೈಡ್ :
ಇವರ ದಿನದ ಆಹಾರದ ಪಟ್ಟಿ,
3 ಹಸಿರು ದ್ರಾಕ್ಷಿ- ಬ್ರೇಕ್ಪಾಸ್ಟ್ (ಬೆಳಗ್ಗಿನ ಉಪಹಾರ)
2 ಹಸಿರು ದ್ರಾಕ್ಷಿ- ಸ್ನಾಕ್ಸ್
6 ಹಸಿರು ದ್ರಾಕ್ಷಿ – ಬಿಂಜ್

SUPERMODEL-DIET-11

ರೀ, ಏನ್ರೀ ಇದು ನೆಮ್ಮದಿಯಿಂದ ತಿಂದು ಬದುಕೋದು ಬಿಟ್ಟು..?! ಅವರಿಷ್ಟ ನಾವೇನೂ ಹೇಳೋಕೆ ಆಗಲ್ಲ…! ಆದ್ರೂ.. ಈ ರೀತಿ ಎಲ್ಲಾ ಡಯೇಟ್ ಮಾಡೋರಿಗಿಂತ ಸಾಮನ್ಯರಂತೆ ಆರಾಮಾಗಿ ತಿನ್ನೋರೇ ಸಖತ್ ಆಗಿದ್ದಾರೆ ಅನ್ಸಲ್ವಾ..?! ಇಲ್ಲಿ ಸೂಪರ್ ಮಾಡೆಲ್ ಗಳು ಏನ್ ತಿನ್ತಾರೆ ಅನ್ನೋ ವಿಷಯ ಹೇಳೋ ಜೊತೆ ಜೊತೆಗೇನೇ ನೀವು ಸೂಪರ್ ಮಾಡೆಲ್ ಗಳಾಗುವುದು ಎಂಬ ಟಿಪ್ಸ್ ಕೂಡ ಕೊಟ್ಟಿದ್ದೇನೆ ಹಹಹಹ..

LEAVE A REPLY

Please enter your comment!
Please enter your name here