ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಸೀದಾ ಜೈಲಿಗೆ..!! ಹೊಸ ರೂಲ್ಸ್..!!!
ಟ್ರಾಫಿಕ್ ನಿಯಮಗಳು ಇರುವುದು ಸಾರ್ವಜನಿಕ ಅನುಕೂಲಕ್ಕಾಗಿಯೆ.. ಆದರೆ ಹಲವು ಬಾರಿ ಈ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸವಾರರು ಕಾನೂನು ಉಲ್ಲಂಘಿಸುತ್ತಾರೆ.. ಈ ಸಂದರ್ಭದಲ್ಲಿ ದಂಡ ಕಟ್ಟಿಸಿಕೊಂಡು ವಾಹನವನ್ನ ಬಿಡುವುದು ಸಾಮಾನ್ಯವಾಗಿದೆ.. ಆದರೆ ಇನ್ನು ಮುಂದೆ ಹೀಗೆ ಇರೋದಿಲ್ಲ..
ಹೌದು, ದೇಶದಲ್ಲಿ ಗರಿಷ್ಠ ಟ್ರಾಫಿಕ್ ರೂಲ್ಸ್ ನಿಯಮವನ್ನ ಬ್ರೇಕ್ ಮಾಡುವ ನಗರಗಳಲ್ಲಿ ಹೈದ್ರಾಬಾದ್ ಕೂಡ ಸೇರಿಕೊಂಡಿದೆ.. ಹೀಗಾಗೆ ಅಲ್ಲಿನ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಯಾವುದೇ ವಾರ್ನಿಂಗ್, ನೋಟೀಸ್ ನೀಡದೆ ರೂಲ್ಸ್ ಬ್ರೇಕ್ ಮಾಡಿದವರನ್ನ ಜೈಲಿಗಟ್ಟಲು ಸಿದ್ದವಾಗಿದೆ.. ಕನಿಷ್ಟವೆಂದರು 4 ದಿನ ಜೈಲಿನಲ್ಲಿ ವಾಸ ಮಾಡಬೇಕಾಗುತ್ತದೆ…
ಈಗಾಗ್ಲೇ ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನ 4 ದಿನ ಜೈಲಿಗಟ್ಟಿದ್ದಾರೆ.. ಜೊತೆಗೆ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ ವ್ಯಕ್ತಿಯನ್ನ ಜೈಲಿನಲ್ಲಿ ಕೂರಿಸಿದ್ರು… ಈ ಕಟ್ಟುನಿಟ್ಟಿನ ನಿರ್ಧಾರದಿಂದಾದ್ರು, ಮುಂದಿನ ದಿನಗಳಲ್ಲಿ ಸವಾರರು ನಿಯಮಗಳನ್ನ ಪಾಲಿಸ್ತಾರ ಕಾದು ನೋಡ್ಬೇಕು..