ನಮ್ಮ ಕನ್ನಡದ ಟ್ರೋಲ್ ಪೇಜ್ ಗಳಿಗೂ ರಶ್ಮಿಕಾ ಮಂದಣ್ಣ ಅವರಿಗೂ ಯಾವ ಜನ್ಮದ ಬಂಧವೋ ಏನೋ ಪ್ರತಿದಿನ ಒಂದಲ್ಲ ಒಂದು ಟ್ರೋಲ್ ಪೇಜ್ ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುತ್ತಲೇ ಇರುತ್ತವೆ. ಇನ್ನು ಕನ್ನಡದ ಹಲವಾರು ನಟಿಯರನ್ನು ಬಿಟ್ಟು ರಶ್ಮಿಕಾ ಮಂದಣ್ಣ ಅವರನ್ನೇ ಏಕೆ ಟ್ರೋಲ್ ಪೇಜ್ಗಳು ಟಾರ್ಗೆಟ್ ಮಾಡುತ್ತಿದೆ ಎಂಬುದಕ್ಕೆ ಕಾರಣವೂ ಇದೆ ಅದೇನೆಂದರೆ ರಶ್ಮಿಕಾ ಅವರಿಂದ ಆಗಾಗ ಕನ್ನಡ ಭಾಷೆಯ ಮತ್ತು ಕರ್ನಾಟಕದ ನಿರ್ಲಕ್ಷ್ಯ ಆಗುತ್ತಿರುವುದು. ಹೌದು ಈ ಕಾರಣವನ್ನು ಇಟ್ಟುಕೊಂಡು ಹಲವಾರು ದಿನಗಳಿಂದ ರಶ್ಮಿಕಾ ಅವರ ಟ್ರೋಲ್ ಮಾಡಲಾಗುತ್ತಿದೆ.
ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರ ಸಹನೆ ಮೀರಿದ್ದು ಟ್ರೋಲ್ ಪೇಜ್ ಒಂದು ರಶ್ಮಿಕಾ ಅವರ ಬಾಲ್ಯದ ಫೋಟೊವನ್ನು ಬಳಸಿ ಕೆಟ್ಟದಾಗಿ ಟ್ರೋಲ್ ಮಾಡಿದ್ದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿ , ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತುಂಬಾ ದಿನಗಳಿಂದ ನನ್ನನ್ನು ತುಂಬಾ ಕೆಟ್ಟದಾಗಿ ಟ್ರೋಲ್ ಮಾಡಲಾಗುತ್ತಿದೆ ಇದು ಸರಿ ಹೋಗುತ್ತೆ ಅಂತ ಸುಮ್ನೆ ಇದ್ದೆ ಆದರೆ ಇದು ನಿಲ್ಲುವ ಹಾಗೆ ಕಾಣ್ತಿಲ್ಲ ಎಂದು ರಶ್ಮಿಕಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಕೆಲಸದ ಬಗ್ಗೆ ಮಾತನಾಡುವ ಹಕ್ಕು ನಿಮಗಿದೆ ಆದರೆ ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಎಂದು ಟ್ರೋಲ್ ಪೇಜ್ ಗಳಿಗೆ ರಶ್ಮಿಕಾ ಖಾರವಾಗಿ ಟಾಂಗ್ ನೀಡಿದ್ದಾರೆ.