ಟ್ರ್ಯಾಕ್ಟರ್ ಖರೀದಿಸಿ ಸ್ವತಃ ಚಲಾಯಿಸಿದ್ರು ಹೆಚ್.ಡಿ.ಕುಮಾರಸ್ವಾಮಿ

Date:

ರಾಮನಗರ: ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿ ಕೃಷಿ ಭೂಮಿ ಹೊಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಕೃಷಿ ಚಟುವಟಿಕೆಗಳಿಗಾಗಿ ಹೊಸ ಟ್ರ್ಯಾಕ್ಟರ್ ಖರೀದಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೊಸ ಟ್ರ್ಯಾಕ್ಟರ್ ಅನ್ನು ಸ್ವಾಗತಿಸಿದ ಕುಮಾರಸ್ವಾಮಿಯವರು ತಾವೇ ಟ್ರ್ಯಾಕ್ಟರ್ ಚಲಾಯಿಸಿದರು. ತಮ್ಮ ಕೃಷಿಭೂಮಿಯನ್ನು ಮಾದರಿ ತೋಟವನ್ನಾಗಿ ಪರಿವರ್ತಿಸಲು ಕೊರೊನಾ ಸಂದರ್ಭದಲ್ಲಿ ಹೆಚ್ಚು ಆಸಕ್ತಿ ತೋರಿಸಿರುವ ಕುಮಾರಸ್ವಾಮಿ ಇತ್ತೀಚಿನ ತಿಂಗಳಲ್ಲಿ ಹೆಚ್ಚು ಕಾಲ ತೋಟದಲ್ಲೇ ವಾಸ್ತವ್ಯ ಹೂಡಿದ್ದಾರೆ.

ಟ್ರ್ಯಾಕ್ಟರ್ ವಿಶೇಷ ಜಾನ್ ಡಿರ್ 5210 ಗೇರ್ ಪ್ರೊ ಟ್ರಾಕ್ಟರ್ ಹಾಗೂ 42 ಬ್ಲೇಡ್ ಇರುವ ರೋಟವೇಟರ್. ಟ್ರ್ಯಾಕ್ಟರ್ 50hp ಪವರ್ ಹೊಂದಿದ್ದು ಸರ್ವ ಕೃಷಿ ಕಾಮಗಾರಿಗಳನ್ನು ಮಾಡುತ್ತದೆ. ತಾಂತ್ರಿಕತೆಯಲ್ಲಿ ದಕ್ಷತೆಯುಳ್ಳ ಗೇರ್ ಬಾಕ್ಸ್ ಮತ್ತು 4 ವೀಲ್ ಡ್ರೈವ್ ಗಾಡಿಯಾಗಿರುತ್ತದೆ. ಜಾನ್ ಡಿಯರ್ ಭಾರತದಲ್ಲಿ 22 ವರ್ಷಗಳಿಂದ ರೈತರ ಸೇವೆಗೆ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳು ಮಾರಾಟ ಮಾಡುತ್ತಿರುತ್ತದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...