ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಉತ್ತಮ ಆರಂಭವನ್ನು ಪಡೆದುಕೊಳ್ಳುವುದರ ಮೂಲಕ ಮಿಂಚುತ್ತಿದೆ. ಆಡಿರುವ 3ಪಂದ್ಯಗಳಲ್ಲಿ ಮೂರನ್ನು ಕೆತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರಾಜಸ್ಥಾನ್ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಇನ್ನು ರಾಜಸ್ಥಾನ್ ವಿರುದ್ಧದ ಈ ಪಂದ್ಯದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಮುಟ್ಟುತ್ತಿದೆ. ಹೌದು ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಆಡುತ್ತಿರುವ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿನ 200ನೇ ಪಂದ್ಯವಾಗಿದ್ದು 200ಕ್ಕಿಂತ ಹೆಚ್ಚಿನ ಐಪಿಎಲ್ ಪಂದ್ಯಗಳನ್ನಾಡಿರುವ ಎರಡನೇ ಐಪಿಎಲ್ ತಂಡ ಎನಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೊದಲು 200+ ಪಂದ್ಯಗಳನ್ನಾಡಿದ ಐಪಿಎಲ್ ತಂಡ ಎನಿಸಿಕೊಂಡಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 200+ ಪಂದ್ಯಗಳನ್ನಾಡಿದ ಎರಡನೇ ಐಪಿಎಲ್ ತಂಡ ಎನಿಸಿಕೊಂಡಿದೆ.