ಕಾಫಿನಾಡಿನ ಕುವರ…ಇಡೀ ವಿಶ್ವಕ್ಕೆ ಕಾಫಿಯ ಕಂಪನ್ನು ಪಸರಿಸಿದ ಕಾಫಿ ಸಾಮ್ರಾಜ್ಯದ ಸಾಮ್ರಾಟ…! ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರ ಅಳಿಯ , ಅದೆಷ್ಟೋ ಕುಟುಂಬಗಳಿಗೆ ಆಸರೆಯಾದ ಹೆಸರಾಂತ ಉದ್ಯಮಿ…ಮಲೆನಾಡ ಮಗ..ಈ ದೇಶದ ಹೆಮ್ಮೆಯ ಸಿದ್ಧಾರ್ಥ್ ಸಾವಿಗೆ ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಸಿದ್ಧಾರ್ಥ್ ನಾಪತ್ತೆಯಾಗಿದ್ದಾರೆ ಅಂತ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದ ಕೂಡಲೇ ಎಸ್.ಎಂ ಕೃಷ್ಣ ಅವರ ಮನೆಯತ್ತ ತೆರಳಿ ಅವರಿಗೆ ಧೈರ್ಯ ಹೇಳುವ ಕೆಲಸವನ್ನು ಮಾಡಿದವರಲ್ಲಿ ಡಾ. ರಾಜ್ ಕುಮಾರ್ ಕುಟುಂಬದವರು ಸಹ ಪ್ರಮುಖರು. ರಾಘಣ್ಣ , ಪುನೀತ್ ಎಲ್ಲರೂ ಕೃಷ್ಣರ ಮನೆಗೆ ಹೋಗಿ ಅವರೊಡನೆ ಇದ್ದರು. ಅದು ಹಿಂದೆ ಎಸ್ ಎಂ ಕೃಷ್ಣ & ಫ್ಯಾಮಿಲಿ…ಅದರಲ್ಲೂ ಸಿದ್ದಾರ್ಥ್ ಮಾಡಿದ್ದ ಉಪಕಾರ ಡಾ.ರಾಜ್ ಕುಟುಂಬ ಸಿದ್ದಾರ್ಥ್ ಗಾಗಿ ಮಿಡಿಯುವಂತೆ ಮಾಡಿದ್ದು…!
ಯೆಸ್ ಅದು 2000 ಇಸವಿ..ಇಡೀ ಕರ್ನಾಟಕ ದುಃಖ ಸಾಗರದಲ್ಲಿ ಮುಳುಗಿತ್ತು. ಕಾಡುಗಳ್ಳ ವೀರಪ್ಪನ್ ವರನಟ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸಿದ್ದ..! ಡಾ.ರಾಜ್ ಅವರನ್ನು ಸುರಕ್ಷಿತವಾಗಿ ಕರೆತರಬೇಕೆಂದು ಪಣ ತೊಟ್ಟಿತ್ತು. ಅಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಎಸ್.ಎಂ ಕೃಷ್ಣ ಅವರು… ನಮ್ಮನ್ನೆಲ್ಲಾ ಅಗಲಿರುವ ಸಿದ್ದಾರ್ಥ್ ಅವರ ಮಾವ ಎಸ್.ಎಂ ಕೃಷ್ಣ…
ಡಾ.ರಾಜ್ ಕುಮಾರ್ ಅವರ ಅಪಹರಣವಾದಾಗ ಸರ್ಕಾರಕ್ಕೆ ಸಂಬಂಧಿಸದವರ ಸಹಾಯ ಬೇಕಿತ್ತು. ಸಿದ್ಧಾರ್ಥ್ ಆ ಕೆಲಸವನ್ನು ಮಾಡಿದ್ದರು. ತಮಿಳುನಾಡಿನ ಹೋರಾಟಗಾರ ನೆಡುಮಾರನ್, ಪತ್ರಕರ್ತ ನಕ್ಕಿರನ್ ಗೋಪಾಲ್ ಸೇರಿ ಹಲವರನ್ನು ಭೇಟಿಯಾಗಿ ರಾಜ್ ಕುಮಾರ್ ಅವರನ್ನು ವಾಪಸ್ ಕರೆತರುವ ಬಗ್ಗೆ ಮಾತುಕತೆ ಮಾಡಿದ್ದರು. ಆ ವ್ಯಕ್ತಿಗಳು ನಮ್ಮ ರಾಜ್ ಅವರನ್ನು ಬಿಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾಫಿ ಸಾಮ್ರಾಟ್ ಅಂದು ಮಾಡಿದ್ದ ಸೇವೆ ಮಹತ್ವದ್ದು..ಅವರಿಲ್ಲದ ಈ ಹೊತ್ತಲ್ಲಿ…ಕಾಫಿ ಕಹಿಯಾಗಿರುವಾಗ ಇದನ್ನು ನೆನಪು ಮಾಡಿಕೊಳ್ಳುತ್ತಿದ್ದೇವಷ್ಟೇ…ಸಿದ್ದಾರ್ಥ್.. ವಾಪಸ್ ಬರ್ತಿದ್ದೀರಾ ಅಲ್ವಾ..?ಅಂತ ಕೇಳೊಂದೊಂದೇ…ಅದು ನಮ್ ನಮ್ಮ ಸಮಾಧಾನಕ್ಕೆ ಹೇಳಿಕೊಳ್ಳ ಬೇಕಷ್ಟೇ..