ಡಿಕೆ ಶಿವಕುಮಾರ್ ಅವರನ್ನು ಅಕ್ರಮ ಹಣ ಹೊಂದಿರುವ ಆರೋಪದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು. ಹೌದು ದೆಹಲಿಯಲ್ಲಿರುವ ಫ್ಲ್ಯಾಟ್ವೊಂದರಲ್ಲಿ ಡಿಕೆಶಿ ಅವರಿಗೆ ಸೇರಿದ ಅಕ್ರಮ ಹಣ ದೊರೆತಿದ್ದ ಕಾರಣ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದರು. ಇನ್ನು ಡಿಕೆಶಿ ಅವರ ಬಂಧನ ಆಗಿ ಐವತ್ತು ದಿನ ಕಳೆದರೂ ಸಹ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಸುಮಾರು ಬಾರಿ ಪ್ರಯತ್ನ ಪಟ್ಟರೂ ಸಹ ಯಾವುದೇ ಪ್ರಯೋಜನ ಆಗದೆ ಡಿಕೆಶಿ ಅವರು ತಿಹಾರ್ ಜೈಲಿನಲ್ಲಿಯೇ ಇದ್ದರು.
ಆದರೆ ಇಂದು ದೆಹಲಿ ಹೈಕೋರ್ಟ್ನಲ್ಲಿ ಡಿಕೆಶಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಡಿಕೆಶಿ ಅವರಿಗೆ ಬೇಲ್ ಸಿಕ್ಕಿದೆ. ಹೌದು ಇಂದು ಡಿಕೆಶಿ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು 25 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶೂರಿಟಿ ಮೇರೆಗೆ ಬೇಲ್ ನೀಡಿದೆ.