ಡಿಕೆಶಿಯ ಮುಖ್ಯಮಂತ್ರಿ ವಿಚಾರಕ್ಕೂ ಈ ಚುನಾವಣೆ ಸಂಬಂಧವೇ ಇಲ್ಲ: ಸಚಿವ ಚಲುವರಾಯಸ್ವಾಮಿ
ರಾಮನಗರ: ಡಿಕೆಶಿಯ ಮುಖ್ಯಮಂತ್ರಿ ವಿಚಾರಕ್ಕೂ ಈ ಚುನಾವಣೆ ಸಂಬಂಧವೇ ಇಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿಯ ಮುಖ್ಯಮಂತ್ರಿ ವಿಚಾರಕ್ಕೂ ಈ ಚುನಾವಣೆ ಸಂಬಂಧವೇ ಇಲ್ಲ. ಇದೆಲ್ಲ ಹೈಕಮಾಂಡ್ ವಿಚಾರ. ಡಿಕೆಶಿ, ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಚೆನ್ನಾಗಿದ್ದಾರೆ. ಅದನ್ನೆಲ್ಲ ಅವರೆ ನೋಡಿಕೊಳ್ಳುತ್ತಾರೆ ಎಂದರು.
ಇನ್ನೂ ರಾಜಕಾರಣದಲ್ಲಿ ಪಕ್ಷಾಂತರ ಸಾಮಾನ್ಯ. ಜನತಾದಳವೇ ಅನೇಕ ಪಕ್ಷಗಳಾಗಿ ಬದಲಾಗಿವೆ. ಅದು ಪಕ್ಷಾಂತರದ ಮಾದರಿಯೇ ಆಗಿತ್ತು. ಪಕ್ಷದಿಂದ ಯಾರಾದರೂ ಹೊರಗೆ ಹೋದರೆ, ಅದು ಅವರಿಗೆ ನಷ್ಟ. ಪಕ್ಷ ಬದಲಾವಣೆಗೆ ಸಿಪಿವೈ ಅವರನ್ನು ದೂರಿದರೆ ತಪ್ಪು. ಅನೇಕ ಕಾರಣಗಳಿಂದ ಅವರು ಪಕ್ಷ ಬದಲಿಸಿದ್ದಾರೆ ಎಂದರು.
ದೇವೇಗೌಡರನ್ನು ನಾವು ಹೋಲಿಕೆ ಮಾಡಲು ಸಾಧ್ಯವಿಲ್ಲ. ಅವರು ದೊಡ್ಡವರು. ಅವರು ವಯಸ್ಸಿನಲ್ಲಿಯೂ ದೊಡ್ಡವರು. ಅವರು ಯಾರಿಗೆ ಬೇಕಿದ್ದರೂ ಸೊಕ್ಕು ಮುರಿಯುತ್ತೆನೆ ಎಂದು ಹೇಳಬಹುದು. ಅವರ ಮಾತಿಗೆ ನಾವು ಕೌಂಟರ್ ನೀಡಲು ಆಗುವುದಿಲ್ಲ. ಅವರ ಹೆಚ್ಚಿನ ಮಾತುಗಳು ಅವರಿಗೆ ಮುಳುವಾಗಲಿದೆ ಎಂದರು.