No menu items!
17.7 C
Munich
Friday, May 1, 2026

ಇಂದು ಕೇಂದ್ರ ಬಜೆಟ್ ಮಂಡನೆ: 2026–27ರ ಹಣಕಾಸು ಯೋಜನೆ ಅನಾವರಣ

Must read

ಇಂದು ಕೇಂದ್ರ ಬಜೆಟ್ ಮಂಡನೆ: 2026–27ರ ಹಣಕಾಸು ಯೋಜನೆ ಅನಾವರಣ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2026–27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಲೋಕಸಭೆಯ ವ್ಯವಹಾರಗಳ ಪಟ್ಟಿಯ ಪ್ರಕಾರ, ಸದನದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಪ್ರಾರಂಭವಾಗಲಿದೆ. ಈ ವೇಳೆ ಸೀತಾರಾಮನ್ ಅವರು 2026–27ನೇ ಸಾಲಿನ ಭಾರತ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚದ ವಿವರಗಳನ್ನು ಒಳಗೊಂಡ ಬಜೆಟ್ ಮಂಡಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಲೋಕಸಭೆಯಲ್ಲಿ ಹಣಕಾಸು ಮಸೂದೆ–2026 ಅನ್ನು ಮಂಡಿಸಲು ಹಣಕಾಸು ಸಚಿವೆ ಅನುಮತಿ ಕೋರಲಿದ್ದಾರೆ. ಮಸೂದೆಯನ್ನು ಅವರು ಔಪಚಾರಿಕವಾಗಿ ಮಂಡಿಸಲಿದ್ದು, ಸರ್ಕಾರದ ಹಣಕಾಸು ಪ್ರಸ್ತಾವನೆಗಳಿಗೆ ಈ ಮಸೂದೆ ಕಾನೂನುಬದ್ಧತೆ ನೀಡುತ್ತದೆ ಎಂದು ವ್ಯವಹಾರಗಳ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಇಂದಿನ ಬಜೆಟ್ ಮೂಲಕ ನಿರ್ಮಲಾ ಸೀತಾರಾಮನ್ ಅವರು ಭಾರತದ ಸತತ ಒಂಬತ್ತನೇ ಕೇಂದ್ರ ಬಜೆಟ್ ಮಂಡಿಸುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಗುರುವಾರ ಅವರು 2025–26ನೇ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು.

- Advertisement -spot_img

More articles

- Advertisement -spot_img

Latest article