ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ವಿಧಾನಸಭೆ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಗರಂ ಆಗಿದ್ದಾರೆ ಎನ್ನಲಾಗಿದೆ.
ಸಿಎಂ ಕುಮಾರಸ್ವಾಮಿ ವಿಶ್ವಾಸ ಮತ ಯಾಚಿಸಲು ಸಮಯ ನಿಗದಿ ಮಾಡುವ ಕುರಿತಾಗಿ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದ ವೇಳೆ ವಿಶ್ವಾಸಮತ ಯಾಚಿಸಲು ಗುರುವಾರ ನಿಗದಿ ಮಾಡಲಾಗಿದೆ.
ಬಳಿಕ ಕಲಾಪ ನಡೆಸಲು ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಒಂದು ವೇಳೆ ಕಲಾಪ ನಡೆಸಿದರೆ ಭಾಗವಹಿಸುವುದಿಲ್ಲ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಆಗ ಡಿ.ಕೆ. ಶಿವಕುಮಾರ್, ಕಲಾಪ ನಡೆಸಿ. ಏನೂ ಆಗಲ್ಲವೆಂದು ಹೇಳಿದ್ದಾರೆ. ಇದರಿಂದ ಸಿಟ್ಟಾದ ರಮೇಶ್ ಕುಮಾರ್, ನಾನು ಸ್ಪೀಕರ್. ನನಗೆ ಯಾರೂ ಆದೇಶ ಕೊಡಬೇಕಿಲ್ಲ.ಏನು ಮಾಡಬೇಕೆನ್ನುವುದು ನನಗೆ ಗೊತ್ತಿದೆ ಎಂದು ಗರಂ ಆಗಿ ಹೇಳಿದ್ದಾರೆ ಎನ್ನಲಾಗಿದೆ.