ಜಾರಿ ನಿರ್ದೇಶನಾಲಯದಿಂದ ನನಗೆ ಈವರೆಗೂ ಯಾವುದೇ ನೋಟಿಸ್ ಬಂದಿಲ್ಲ ಒಂದು ವೇಳೆ ನೋಟಿಸ್, ಸಮನ್ಸ್ ಬಂದರೆ ಒಂದು ಕ್ಷಣವೂ ವಿಳಂಬ ಮಾಡದೆ ಅಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಡಿಕೆ ಸುರೇಶ್ ಹೇಳಿದರು ಹಾಗು ನಾವು ಎಲ್ಲದಕ್ಕೂ ಸಿದ್ಧರಾಗಿದ್ದೇವೆ.
ಮಾಧ್ಯಮದವರಿಗೂ ಉತ್ತರ ಕೊಡುತ್ತೇವೆ. ಅಧಿಕಾರಿಗಳಿಗೂ ಉತ್ತರ ನೀಡುತ್ತೇವೆ. ಇದರ ಹಿಂದಿರುವವರಿಗೂ ಉತ್ತರ ನೀಡುತ್ತೇವೆ. ಅಣ್ಣ ಆತ್ಮವಿಶ್ವಾಸದಿಂದ್ದಾರೆ. ಅವರು ಧೈರ್ಯಗೆಟ್ಟಿಲ್ಲ. ಆರೋಗ್ಯವೂ ಸ್ಥಿರವಾಗಿದೆ. ಕಷ್ಟದ ಕಾಲ ಎಂದುಕೊಂಡು ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆ ಎಂದು ಅಣ್ಹ ಹೇಳಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ