ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಇನ್ನೂ ಕುರುಕ್ಷೇತ್ರದ ಗುಂಗಲ್ಲೇ ಇದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಘರ್ಜಿಸಿದ್ದ ಕುರುಕ್ಷೇತ್ರದ ಸುಯೋಧನ ಇತ್ತೀಚೆಗಷ್ಟೇ ಮಲೆಯಾಳಂನಲ್ಲೂ ಅಬ್ಬರ ಶುರುಮಾಡಿದ್ದಾನೆ. 2019ರ ಆರಂಭದಲ್ಲಿ ದರ್ಶನ್ ಅಭಿನಯದ ಯಜಮಾನ ರಿಲೀಸ್ ಆಗಿತ್ತು. ಯಜಮಾನನ ಶತ ದಿನದ ಓಟದ ಬೆನ್ನಲ್ಲೇ ಕುರುಕ್ಷೇತ್ರ ರಿಲೀಸ್ ಆಗಿತ್ತು. ಶತಕೋಟಿ ಗಳಿಕೆ ದಾಟಿದ ಕುರುಕ್ಷೇತ್ರದಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶತಕೋಟಿ ಸರ್ದಾರ ಎನ್ನುವ ಬಿರುದಿಗೂ ಭಾಜನರಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಲ್ಲದೆ ರೆಬೆಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡ ತಾರಾಗಣವನ್ನು ಕುರುಕ್ಷೇತ್ರ ಹೊಂದಿದೆ. ಕುರುಕ್ಷೇತ್ರದ ಸಂಭ್ರಮದಲ್ಲಿ ತೇಲುತ್ತಿರುವ ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಬಂದಿದೆ.
ದರ್ಶನ್ ಅಭಿನಯದ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ಒಡೆಯ ಡಿಸೆಂಬರ್ನಲ್ಲಿ ರಿಲೀಸ್ ಆಗುವುದು ಬಹುತೇಕ ಕನ್ಫರ್ಮ್ ಆಗಿದೆ. ಸದಸ್ಯ ಸ್ವಿಜ್ಜರ್ಲ್ಯಾಂಡಿನಲ್ಲಿ ಒಡೆಯ ಚಿತ್ರೀಕರಣ ನಡೀತಾ ಇದೆ. ಎರಡು ಡ್ಯುಯೆಟ್ ಸಾಂಗ್ ಶೂಟಿಂಗ್ಗಾಗಿ ಚಿತ್ರತಂಡ ಸ್ವಿಜ್ಜರ್ಲ್ಯಾಂಡಲ್ಲಿದ್ದು, ಆ ಎರಡು ಸಾಂಗ್ಗಳ ಚಿತ್ರೀಕರಣ ಕಂಪ್ಲೀಟ್ ಆದಲ್ಲಿ ಡಿಸೆಂಬರ್ರಲ್ಲಿ ಚಿತ್ರ ರಿಲೀಸ್ ಆಗಲಿದೆ ಎಂದು ಡೈರೆಕ್ಟರ್ ಎಂಡಿ ಶ್ರೀಧರ್ ಹೇಳಿದ್ದಾರೆಂದು ವರದಿಯಾಗಿದೆ.
ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಡೈರೆಕ್ಟರ್ ಎಂಡಿ ಶ್ರೀಧರ್ ಕಾಂಬಿನೇಷನ್ನಿನ 3ನೇ ಸಿನಿಮಾ. ಇದು ಅಣ್ಣ-ತಮ್ಮಂದಿರ ಸೆಂಟಿಮೆಂಟ್ ಉಳ್ಳ ಸಿನಿಮಾವಾಗಿದ್ದು, ದರ್ಶನ್ ಗಜೇಂದ್ರ ಎಂಬ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಸ್ವಿಜ್ಜರ್ಲ್ಯಾಂಡಿಂದ ಬಂದಮೇಲೆ ಚಿತ್ರತಂಡ ರಿಲೀಸ್ ಬಗ್ಗೆ ಪ್ಲಾನ್ ಮಾಡಿಕೊಳ್ಳಲಿದೆ.