ಕಳೆದ ಕೆಲವು ದಿನಗಳಿಂದ ಮರಾಠಿ (Marathi) ಮತ್ತು ಕನ್ನಡಿಗರ (Kannada) ನಡುವಿನ ನಾನಾ ವಿವಾದಗಳು ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಅದರಲ್ಲೂ ಎಂಇಎಸ್ (MES) ಹೆಸರಿನಲ್ಲಿ ನಡೆಯುತ್ತಿರುವ ನಾನಾ ಘಟನೆಗಳ ವಿರುದ್ಧ ಕನ್ನಡಪರ ಸಂಘಟನೆಗಳು ದೊಡ್ಡ ಮಟ್ಟಿಗೆ ದನಿಯೆತ್ತಿವೆ.
ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಇಂದು ಸಭೆ ಸೇರಿರುವ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ನೇ ತಾರೀಖು ಕರ್ನಾಟಕ ಬಂದ್ ಗೆ (Karnataka Bandh) ಕರೆ ಕೊಟ್ಟಿವೆ. ಒಂದು ವೇಳೆ ಡಿಸೆಂಬರ್ 31ರ ಒಳಗೆ ಎಂಇಎಸ್ನ್ನು ನಿಷೇಧಿಸಿದರೆ ಬಂದ್ ನಡೆಸುವುದಿಲ್ಲ, ಇಲ್ಲದಿದ್ದರೆ ಖಂಡಿತವಾಗಿಯೂ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ತಮ್ಮ ಹೋರಾಟದ ಕುರಿತು ವಿವರವಾಗಿ ಮಾತನಾಡಿದ ವಾಟಾಳ್ ನಾಗರಾಜ್ ಮಾಧ್ಯಮದವ್ರನ್ನ ಸುವರ್ಣ ಸೌಧದಿಂದ ಹೊರಗಡೆ ಹಾಕಿದ್ದಾರೆ.. ಈ ರೀತಿ ಘಟನೆ ಯಾವತ್ತೂ ನಡೆದಿರಲಿಲ್ಲ..ಪ್ರಜಾಪ್ರಭುತ್ವದಲ್ಲಿ ಇದು ಅಗೌರವ, ಸ್ಪೀಕರ್ ತೀರ್ಮಾನಕ್ಕೆ ನಮ್ಮ ದಿಕ್ಕಾರ ಎಂದರು.