ಡಿ ಬಾಸ್ ರೀತಿ ಹಾಲು ಕರೆದ ಅದಿತಿ ಪ್ರಭುದೇವ

Date:

ನಟಿ ಅದಿತಿ ಪ್ರಭುದೇವ, ಸದ್ಯ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ಕೆಲ ನಟಿಯರಲ್ಲೊಬ್ಬರು. ಕಿರುತೆರೆಯಿಂದ ಹಿರಿತೆರೆಗೆ ಪದಾರ್ಪಣೆ ಮಾಡಿದ ಅದಿತಿ ಪ್ರಭುದೇವ ಕೆಲವೊಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಆಗಾಗ ಸುದ್ದಿಯಾಗುವ ಅದಿತಿ ಪ್ರಭುದೇವ ಇತ್ತೀಚಿಗಷ್ಟೆ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು.

ಈ ವಿಡಿಯೋ ನೋಡಿದ ಜನ ಅದಿತಿ ಪ್ರಭುದೇವ ಹಳ್ಳಿ ಜೀವನದ ಕುರಿತು ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. ಅದರಲ್ಲಿಯೂ ಅದಿತಿ ಪ್ರಭುದೇವ ಹಸುವಿನ ಹಾಲು ಕರೆಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲ ನಟಿಯರು ಪಬ್ ಬಾರ್ ಗಳಿಗೆ ಹೋಗಿ ವಿಡಿಯೋ ಮಾಡಿ ಪೋಸ್ಟ್ ಮಾಡಿದರೆ ನಟಿ ಅದಿತಿ ಪ್ರಭುದೇವ ಮಾತ್ರ ದನದ ಕೊಟ್ಟಿಗೆಯಲ್ಲಿ ಕೆಲಸಮಾಡಿ ಹಸುವಿನ ಹಾಲು ಕರೆಯುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

 

ಪಟ್ಟಣದ ವ್ಯಾಮೋಹಕ್ಕೆ ಒಳಗಾಗದೆ ಹಳ್ಳಿ ಜೀವನವನ್ನು ಪ್ರೋತ್ಸಾಹಿಸಿ ಗೋವುಗಳ ಸಂರಕ್ಷಣೆ ಮಾಡಿ ಎಂಬ ಸಂದೇಶವನ್ನು ನೀಡಿದ ಅದಿತಿ ಪ್ರಭುದೇವಗೆ ಮೆಚ್ಚುಗೆಯ ಸುರಿಮಳೆ ಸುರಿದಿದೆ. ಹಾಗೂ ಕೆಲವೊಂದಿಷ್ಟು ಮಂದಿ ನಟ ದರ್ಶನ್ ಅವರ ರೀತಿಯೇ ಅದಿತಿ ಪ್ರಭುದೇವ ಕೂಡ ಪ್ರಾಣಿ ಪ್ರಿಯೆ, ಇವರು ಸಹ ದರ್ಶನ್ ಅವರ ರೀತಿಯೇ ಹಸುವಿನ ಹಾಲು ಕರೆದಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಅದಿತಿ ಪ್ರಭುದೇವಗೆ ಫುಲ್ ಫಿದಾ ಆಗಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...