‘ತಕಧಿಮಿತ’ನಲ್ಲೂ ‘ಶನಿ’ಯದ್ದೇ ಕಾರುಬಾರು..! ಈ ಹೆಡ್ ಲೈನ್ ನೋಡಿದ್ರೆ ಏನಿದು ವಿಚಿತ್ರವಾಗಿದೆ ಎಂದು ಕೆಲವ್ರು ಅಂದುಕೊಂಡಿರ್ತೀರಿ. ಮತ್ತೆ ಕೆಲವರು ಇದು ಶನಿ ಧಾರವಾಹಿಗೂ ತಕಧಿಮಿತ ಶೋ ಗೂ ಸಂಬಂಧಿಸಿದ್ದೆಂದು ಕೊಂಡಿರ್ತೀರಿ.
ಹೀಗೆ ಶನಿ ಸೀರಿಯಲ್ ಮತ್ತು ತಕಧಿಮಿತ ಶೋಗೂ ಸಂಬಂಧ ಇದೆಕೊಂಡವರ ಯೋಚನೆ ಸತ್ಯ.
ಶನಿ ಧಾರವಾಹಿಯ ಶನಿ ಪಾತ್ರದಾರಿ ಸುನೀಲ್ ಅವರ ಪರಿಚಯ ನಿಮಗಿದೆ. ಸುನೀಲ್ ಶನಿ ಧಾರವಾಹಿ ಮೂಲಕ ಅದರಲ್ಲೂ ಶನಿ ಎಂದೇ ಹೆಸರುವಾಸಿಯಾಗಿರುವ ಅದ್ಭುತ ಕಲಾವಿದ. ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಕಲಾವಿದನಾಗಿ ನೆಲೆನಿಲ್ಲಲು ತಯಾರಾಗಿರುವ ಪ್ರತಿಭಾವಂತ, ಸಕಲಕಲಾವಲ್ಲಭ..ಈ ಶನಿ ಖ್ಯಾತಿಯ ಸುನೀಲ್.
ಸುನೀಲ್ ಅವರ ಬಗ್ಗೆ ಇಲ್ಲಿ ಹೇಳುವುದಕ್ಕೆ ಕಾರಣವೂ ಇದೆ. ಸುನೀಲ್ ಇವತ್ತು ನೆನಪಾಗುತ್ತಿರುವುದಕ್ಕೆ ಮುಖ್ಯ ಕಾರಣ ತಕಧಿಮಿತ ಶೋ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ಜನಪ್ರಿಯ ಡ್ಯಾನ್ಸ್ ಶೋ.
ಈ ದೊಡ್ಡಮಟ್ಟದ ನೃತ್ಯ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ಸುಮನಾ ರಂಗನಾಥ್ , ಶಾಸ್ತ್ರೀಯ ಶೈಲಿಯ ನೃತ್ಯಗಾರ್ತಿ ಅನುರಾಧ ವಿಕ್ರಾಂತ್ ತೀರ್ಪುಗಾರರಾಗಿದ್ದರು. ಖ್ಯಾತ ರಿಯಾಲಿಟಿ ಶೋಗಳ ನಿರೂಪಕ ಅಕುಲ್ ಬಾಲಜಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಫ್ರೆಬ್ರವರಿ2 ರಿಂದ ಪ್ರಸಾರವಾಗುತ್ತಿದ್ದ ಈ ಡ್ಯಾನ್ಸ್ ರಿಯಾಲಿಟಿ ಶೋ ಮುಗಿದೆ.
ಗ್ರ್ಯಾಂಡ್ ಫಿನಾಲೆಯಲ್ಲಿ ಐದು ಜೋಡಿಗಳಿದ್ದರು. ಕಾರುಣ್ಯ-ಮಂಜು, ನೇಹಾ -ಭಾಸ್ಕರ್, ದಿಲೀಪ್ -ರಮ್ಯಾ, ನಮ್ರತಾ-ಕಿಶನ್ ಮತ್ತು ಶನಿ ಖ್ಯಾತಿಯ ಸುನೀಲ್ ಮತ್ತು ದಕ್ಷಿತ ಈ ಐದು ಜೋಡಿಗಳು. ಈ ಜೋಡಿಗಳಲ್ಲಿ ಸುನೀಲ್ -ದಕ್ಷಿತಾ ಜೋಡಿ ಗೆದ್ದಿದೆ. ಗೆದ್ದ ಜೋಡಿಗೆ 10 ಲಕ್ಷ ರೂ ನಗದು, ಟ್ರೋಫಿ ಬಹುಮಾನ ರೂಪದಲ್ಲಿ ಸಿಕ್ಕಿದೆ.
ಹೀಗೆ ‘ತಕಧಿಮಿತ’ದಲ್ಲೂ ಶನಿ ಕಾರುಬಾರು ನಡೆದಿದೆ.
16 ವಾರಗಳು ನಡೆದ ಸ್ಫರ್ದೆ ಇದಾಗಿತ್ತು. ಪ್ರತಿ ಸೆಲಬ್ರೆಟಿ ಜೊತೆ ಒಬ್ಬರು ಜನಸಾಮಾನ್ಯರು ಜೋಡಿಯಾಗಿ ಸ್ಪರ್ಧಿಸಿದ್ದರು. ಒಟ್ಟು 14 ಜೋಡಿ ಸ್ಪರ್ಧೆ ಮಾಡಿತ್ತು.