ತಡರಾತ್ರಿ ದಂಪತಿ ಮೇಲೆ ಕಾರು ಹರಿಸಿದ್ದ ನಟ ನಾಗಭೂಷಣ್ ಅರೆಸ್ಟ್..!

0
468

ಸ್ಯಾಂಡಲ್ ವುಡ್ ನಟ ನಾಗಭೂಷಣ್ ಅವರನ್ನು ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಅವರನ್ನು ಕೋರಮಂಗಲದಲ್ಲಿರುವ ಜಡ್ಜ್ ಮುಂದೆ ಹಾಜರುಪಡಿಸುವುದಾಗಿ ತಿಳಿದು ಬಂದಿದೆ. ನಾಗಭೂಷಣ್ ಅವರು ಕೂಡ ಸ್ವತಃ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಕನ್ನಡದ ಹೆಸರಾಂತ ನಟ ನಾಗಭೂಷಣ್ ಕಾರು ಅಪಘಾತವಾಗಿದ್ದು , ಬೆಂಗಳೂರಿನ ವಸಂತಪುರದ ನಿವಾಸಿ 48ರ ವಯಸ್ಸಿನ ಪ್ರೇಮಾ ಎನ್ನುವವರು ಸಾವನ್ನಪ್ಪಿದ್ದಾರೆ . ನಿನ್ನೆ ತಡ ರಾತ್ರಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಒಂಬತ್ತು ಗಂಟೆಗೆ ನಾಗಭೂಷಣ್ ತಮ್ಮ ಮನೆಗೆ ತೆರಳುವಾಗ ಅಪಘಾತವಾಗಿದೆ ಎಂದು ತಿಳಿದು ಬಂದಿದೆ.
ನಾಗಭೂಷಣ್ ಅವರೇ ಸ್ವತಃ ಕಾರನ್ನು ಚಲಾಯಿಸುತ್ತಿದ್ದರಿಂದ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು ಮಾಹಿತಿ ಪಡೆಯುತ್ತಿದ್ದಾರೆ. ಮೃತರ ಪುತ್ರನು ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದು, ಫುಟ್ ಪಾತ್ ಮೇಲೆ ತಂದೆ ತಾಯಿ ವಾಕ್ ಮಾಡುವಾಗ ಕಾರು ಹಾಯ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.