ವಿದೇಶ ಪ್ರಯಾಣ ಮುಗಿಸಿಕೊಂಡು ಬಂದ ಡಿಕೆ ಶಿವಕುಮಾರ್ ನಿನ್ನೆ ಬೆಂಗಳೂರಿಗೆ ಬಂದಿದ್ದರು. ನಂತರ ಫಲಿತಾಂಶದ ಬಗ್ಗೆ ಚರ್ಚಿಸಲು ಸಿಎಂ ಕುಮಾರಸ್ವಾಮಿ ಭೇಟಿಗೆ ಆಗಮಿಸಿದರು. ಭೇಟಿಗೂ ಮುನ್ನ ಲೋಕಸಭಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ‘ ಎಲ್ಲಿ ತಪ್ಪಾಗಿದೆ ಅಂತ ಗೊತ್ತಾಗುತ್ತಿಲ್ಲ, ರಾಜ್ಯದಲ್ಲಿ ಖರ್ಗೆ, ದೇವೇಗೌಡರು ಸೋತಿದ್ದು ಆತಂಕವಾಗಿದೆ, ಗೆಲುವು ಸಾಧಿಸಿರುವ ಡಿಕೆ ಸುರೇಶ್ ಒಬ್ಬರೇ ಲೋಕಸಭೆಯಲ್ಲಿ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕಾಂಗ್ರೆಸ-ಜೆಡಿಎಸ್ ನಡುವೆ ಮೈತ್ರಿ ಧರ್ಮ ಪಾಲನೆ ಆಗದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ನನ್ನ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಿದ್ದಾರೆ.ಹೀಗಾಗಿ ನಾನು ಯಾರ ವಿರುದ್ಧ ಕೂಡ ಮಾತನಾಡಲ್ಲ, ಈಗ ಎಲ್ಲವೂ ಬಿಎಸ್ ಯಡಿಯೂರಪ್ಪ ಕೈಯಲ್ಲಿದೆ ಎಂದರು.