ತಲೆ ಹೇನಿನ ಸಮಸ್ಯೆಗೆ ಕ್ವಿಕ್ ಪರಿಹಾರ !

Date:

ಹೆಣ್ಣು ಮಕ್ಕಳು ಅಂದ್ರೆ ತಲೆಗೂದಲನ್ನು ಉದ್ದನೆಯದಾಗಿ ಬಿಡೋದು ಅಂದ್ರೆ ತುಂಬಾ ಇಷ್ಟ. ಅದ್ರಲ್ಲೂ ಚಿಕ್ಕ ವಯಸ್ಸಿನಲ್ಲಿ ಉದ್ದ ಕೂದಲು ಬಿಡೋದು ಅಂದ್ರೆ ಶಾಲೆಯಲ್ಲಿ ಕಾಂಪಿಟೇಶನ್​ ಇರುತ್ತೆ ಅಂತಾನೇ ಹೇಳಬಹುದು. ಆದರೇ ಅದರ ಜೊತೆಗೆ ತಲೆಯನ್ನ ನಿರ್ವಹಣೆ ಮಾಡೊದು ಅಷ್ಟು ಸುಲಭವಲ್ಲ. ತಲೆಯಲ್ಲಿ ಹೇನಿನ ಸಮಸ್ಯ ಶುರುವಾದರೆ ಅದೊಂದುರೀತಿ ಅವಮಾನ ಎಂದೇ ಭಾವಿಸಲಾಗುತ್ತೆ. ಇಂತಹ ಸಮಸ್ಯಗೆ ಪರಿಹಾರಗಳು ಸಾಕಷ್ಟು. ಆದರೇ ಕ್ವಿಕ್ ಆಗಿ ಇದು ನಿವಾರಣೆ ಆಗಬೇಕಾದ್ರೆ ಏನು ಮಾಡಬೇಕು ಅನ್ನೊದನ್ನ ನೋಡ್ತಾ ಹೋಗೊಣ‌.

ಇಲ್ಲಿ ತಿಳಿಸಿರುವ ಮನೆ ಮದ್ದುಗಳು ಹೇನುಗಳ ನಿವಾರಣೆಗೆ ಪರಿಣಾಮಕಾರಿಯಾಗಿದ್ದು, ಹೇನುಗಳನ್ನು ನಾಶಮಾಡಿ ಬಿಡುತ್ತವೆ. ಈ ಎಲ್ಲಾ ಮನೆಮದ್ದುಗಳನ್ನು ವಾರಕ್ಕೊಮ್ಮೆಯಾದರೂ ನಿರಂತರ ಹಚ್ಚಿ ಪರಿಣಾಮ ಕಂಡುಕೊಳ್ಳಿ

ಒದ್ದೆ ತಲೆ ಬಾಚಿಕೊಳ್ಳುವುದು: ಮೊದಲಿಗೆ ತಲೆಯ ಸಿಕ್ಕು ಬಿಡಿಸಿಕೊಂಡು ಕೂದಲನ್ನು ಒಣಗಿಸಿ. ನಂತರ ಕೂದಲಿಗೆ ನೀರು ಹಾಕಿ. ಕಂಡೀಷನರ್ ಬಳಸಿ. ಕೂದಲನ್ನು ಎರಡು ವಿಭಾಗ ಮಾಡಿ ಹಾಗೂ ಅಗಲ ಹಲ್ಲುಗಳಿರುವ ಬಾಚಣಿಗೆಯಿಂದ ಬಾಚಿಕೊಳ್ಳಿ. ಒದ್ದೆ ಕೂದಲಿನಲ್ಲಿ ಹೇನುಗಳು ಬೇಗನೇ ಬರುತ್ತವೆ.

ಬೇವಿನ ಎಣ್ಣೆ: ಬೇವಿನ ಎಣ್ಣೆ ಅದ್ಭುತ ಆಯಂಟಿಬ್ಯಾಕ್ಟೀರಿಯಲ್ ಅಂಶಗಳನ್ನೊಳಗೊಂಡಿದೆ. ಇದನ್ನು ತ್ವಚೆಗೂ ಬಳಸಬಹುದು. ಹೇನುಗಳ ನಿವಾರಣೆಗೆ ಇದು ಉತ್ತಮ ಮನೆಮದ್ದಾಗಿದೆ. ಸ್ವಲ್ಪ ಎಣ್ಣೆ ತೆಗೆದುಕೊಂಡು ಅದನ್ನು ಕೂದಲಿಗೆ ಹಚ್ಚಿ. ನಿಮ್ಮ ದಿನವೂ ಬಳಸುವ ತೆಂಗಿನೆಣ್ಣೆಗೂ ಇದನ್ನು ಸೇರಿಸಿಕೊಳ್ಳಿ. ಬೆಚ್ಚಗಿನ ಟವೆಲ್‌ನಿಂದ ಕೂದಲನ್ನು ಸುತ್ತಿಕೊಳ್ಳಿ. ಸ್ವಲ್ಪ ನಿಮಿಷ ಹಾಗೆಯೇ ಬಿಡಿ. ನಂತರ ತಲೆ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಇದನ್ನು ಅನುಸರಿಸಿ ಕೂದಲಿನಿಂದ ಹೇನುಗಳು ನಿವಾರಣೆಯಾಗುತ್ತವೆ

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಬಳಸಿ ತಲೆಯಲ್ಲಿರುವ ಹೇನುಗಳ ನಿರ್ಮೂಲನೆ ಮಾಡಬಹುದು. ಬೆಳ್ಳುಳ್ಳಿಯಲ್ಲಿರುವ ಆಯಂಟಿಬಯಾಟಿಕ್ ಅಂಶಗಳು ಹೇನುಗಳ ನಿರ್ಮೂಲನೆ ಮಾಡುತ್ತದೆ. ಇದು ಕೂದಲನ್ನು ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾ ನಿರ್ಮೂಲನೆ ಮಾಡುತ್ತದೆ. ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ತಲೆಗೆ ಹಾಕಿಕೊಳ್ಳಿ ಇದರಿಂದ ಹೇನುಗಳು ಸಾಯುತ್ತವೆ. ರಸ ಹಾಕಿಕೊಂಡು 15 ರಿಂದ 20 ನಿಮಿಷ ಬಿಡಿ. ಬೆಚ್ಚಗಿನ ನೀರಿನಿಂದ ಕೂದಲು ತೊಳೆದುಕೊಳ್ಳಿ. ವಾರಕ್ಕೊಮ್ಮೆ ಬೆಳ್ಳುಳ್ಳಿ ರಸವನ್ನು ಹೇನುಗಳ ನಿರ್ಮೂಲನೆಗೆ ಬಳಸಿಕೊಳ್ಳಿ.

ಟೀ ಟ್ರಿ ಆಯಿಲ್: ಹೇನುಗಳ ಸರ್ವನಾಶಕ್ಕೆ ಟಿ ಟ್ರಿ ಆಯಿಲ್ ಉತ್ತಮವಾದುದು. ಇದು ಆಯಂಟಿಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿರುವುದರಿಂದ ಹೇನುಗಳನ್ನು ನಾಶಪಡಿಸುತ್ತದೆ. ಈ ಎಣ್ಣೆಗೆ ಲ್ಯಾವೆಂಡರ್ ಎಣ್ಣೆ ಮಿಶ್ರ ಮಾಡಿ. ಶ್ಯಾಂಪೂವಿಗೆ ಇದನ್ನು ಮಿಶ್ರ ಮಾಡಿಕೊಳ್ಳಿ. ಚೆನ್ನಾಗಿ ಕೂದಲಿನ ಬುಡಕ್ಕೆ ತುದಿಗೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ನಂತರ ತಲೆ ತೊಳೆದುಕೊಳ್ಳಿ. ವಾರಕ್ಕೊಮ್ಮೆ ಟೀ ಟ್ರಿ ಆಯಿಲ್ ಕೂದಲಿಗೆ ಬಳಸಿ ನೋಡಿ.

ಈರುಳ್ಳಿ ರಸ: ನೈಸರ್ಗಿಕ ಹೇನು ನಿವಾರಕವಾಗಿ ಈರುಳ್ಳಿ ರಸ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ಆಯಸಿಡಿಕ್ ಅಂಶ ಹೇನುಗಳಿಗೆ ರಾಮ ಬಾಣವಾಗಿದೆ. ಮನೆಯಲ್ಲೇ ಈರುಳ್ಳಿ ರಸ ತಯಾರಿಸಿ ಕೂದಲಿಗೆ ಹಚ್ಚಿಕೊಳ್ಳಿ. ನಂತರ ಚೆನ್ನಾಗಿ ರಸವನ್ನು ತೊಳೆದುಕೊಳ್ಳಿ. ಈರುಳ್ಳಿ ರಸ ಕೂದಲಿಗೆ ರಾಮಬಾಣವಾಗಿದ್ದು ವಾರಕ್ಕೊಮ್ಮೆ ರಸವನ್ನು ಕೂದಲಿಗೆ ಹಚ್ಚಿ ಪ್ರಯೋಜನ ಪಡೆದುಕೊಳ್ಳಿ.

ಆಯಪಲ್ ಸೈಡರ್ ವಿನೆಗರ್: ಆಯಪಲ್ ಸೈಡರ್ ವಿನೇಗರ್ ಕೂಡ ಹೇನುಗಳ ಸಮಸ್ಯೆಗೆ ರಾಮ ಬಾಣ ಎಂದೆನಿಸಿದೆ. ಹೇನುಗಳಿಗೆ ವಿನೇಗರ್ ಬಳಸಿ ಮನೆಯಲ್ಲೇ ಮನೆ ಮದ್ದು ಮಾಡಬಹುದು. 2 ಪೋರ್ಶನ್ ವಿನೇಗರ್ ತೆಗೆದುಕೊಂಡು ಅದಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ನೀರು ಸೇರಿಸಿ. ಇದನ್ನು ತಲೆಬುಡಕ್ಕೆ ಹಚ್ಚಿಕೊಳ್ಳಿ. 15 ರಿಂದ 20 ನಿಮಿಷ ಬಿಡಿ. ನಂತರ ಶ್ಯಾಂಪೂ ಬಳಸಿ ತಲೆ ತೊಳೆದುಕೊಳ್ಳಿ.

Share post:

Subscribe

spot_imgspot_img

Popular

More like this
Related

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

ರಾಜ್ಯದಲ್ಲಿ ಭಾರೀ ಮಳೆ: 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ ಬೆಂಗಳೂರು :...

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ!

ಮಧುಮೇಹದಿಂದ ಹೃದಯ ಆರೋಗ್ಯದವರೆಗೂ ತೊಂಡೆಕಾಯಿ ರಾಮಬಾಣ! ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯೆಂದು...