ಕಾಂಗ್ರೆಸ್ ಪಕ್ಷದ ಮುಖಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕುವುದರ ಮೂಲಕ ರಾಜಕೀಯ ಸಂಚಲನವನ್ನು ದೊಡ್ಡ ಮಟ್ಟದಲ್ಲಿ ಸೃಷ್ಟಿಸಿದ್ದಾರೆ. ಈ ಪೋಸ್ಟ್ ಮೂಲಕ ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಯರ್ರಾಬಿರ್ರಿ ಟಾಂಗ್ ನೀಡಿರುವ ಸಿದ್ದಣ್ಣ ಅವರು ತಮ್ಮ ಮತ್ತು ಜೆಡಿಎಸ್ ಪಕ್ಷದ ನಡುವೆ ಇರುವ ಮನಸ್ತಾಪವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ.
ಕುಮಾರಸ್ವಾಮಿಯವರೇ ನಿಮ್ಮನ್ನು ನಾನು ಸಾಕಿದ್ದೆ ಎಂದು ಯಾವಾಗ ಹೇಳಿದ್ದೆ? ನಿಮ್ಮನ್ನು ಸಾಕಿದವರು ದೇವೇಗೌಡರು ಆದರೆ ಬಳಸಿಕೊಂಡಿದ್ದು ಮಾತ್ರ ನಮ್ಮಂಥವರನ್ನು ಎಂದು ಚಾಟಿ ಬೀಸಿದ್ದಾರೆ. ನಿಮ್ಮ ತಂದೆಯಂತೆ ನೀವು ಬಳಸಿ ಬಿಸಾಡುವ ಪಾಠವನ್ನು ಬೇಗ ಕಲಿತು ಬಿಟ್ಟಿದ್ದೀರಾ ಬೇಕಾದರೆ ಯಡಿಯೂರಪ್ಪನವರನ್ನು ಕೇಳಿ ಎಂದು ಕುಮಾರಸ್ವಾಮಿ ಅವರಿಗೆ ಸಿದ್ದಣ್ಣ ಅವರು ಟಾಂಗ್ ನೀಡಿದ್ದಾರೆ. ನಾನು ಯಾರ ಸಹಾಯವೂ ಇಲ್ಲದೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದೆ ತಾಕತ್ತಿದ್ದರೆ ನೀವು ಒಂದು ಬಾರಿ ಆ ರೀತಿ ಮುಖ್ಯಮಂತ್ರಿಯಾಗಿ ತೋರಿಸಿ ಎಂದು ಸಿದ್ದಣ್ಣ ಕುಮಾರಸ್ವಾಮಿ ಅವರಿಗೆ ಚಾಲೇಂಜ್ ಮಾಡಿದ್ದಾರೆ.