No menu items!
11.9 C
Munich
Thursday, April 30, 2026

ಮೀಟೂ ಆರೋಪ ಮಾಡುತ್ತಿದ್ದಾರೆ ಅರ್ಜುನ್ ಸರ್ಜಾ ಅವರ ಜೊತೆ ನಟಿಸಿದ ಮತ್ತೊಬ್ಬ ನಟಿ..!

Must read

ಮೀಟು ಅಭಿಯಾನದಲ್ಲಿ ನಾಯಕಿಯರು ತಮಗಾದ ಕೆಟ್ಟ ಅನುಭವದ ಬಗ್ಗೆ ತುಂಬಾ ಓಪನ್ ಆಗಿ ಹೇಳಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ನಾಯಕಿಯರು ಚಿತ್ರರಂಗದಲ್ಲಿ ತಮ್ಮ ಮೇಲೆ ಆದ ಅಹಿತಕರ ಘಟನೆಗಳ ಬಗ್ಗೆ ಈ ಮೀಟು ಅಭಿಯಾನದ ಅಡಿಯಲ್ಲಿ ಹೇಳಿಕೊಂಡಿದ್ದು ಇದೀಗ ಮತ್ತೊಬ್ನ ನಟಿ ಈ ವಿಷಯದ ಕುರಿತಾಗಿ ಮಾತನಾಡಿದ್ದಾರೆ. ಹೌದು ಈ ಬಾರಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ಮಾತನಾಡಿರುವ ನಟಿ ಸುರ್ವಿನ್ ಚಾವ್ಲಾ. ಸುರ್ವೀನ್ ಚಾವ್ಲಾ ಅವರು ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದ ಕನ್ನಡ ತೆಲುಗು ಮತ್ತು ಮಲೆಯಾಳಂ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಈ ನಟಿಯ ಎದೆ ಮತ್ತು ತೊಡೆ ಭಾಗವನ್ನು ನೋಡಲು ಕೆಲ ನಿರ್ದೇಶಕರು ಆಸೆ ಪಡುತ್ತಿದ್ದರಂತೆ & ಇನ್ನು ಕೆಲವು ಮಂದಿ ತುಂಬಾ ಕೆಟ್ಟದಾಗಿ ತನ್ನ ಜೊತೆ ಸಂದರ್ಶನಗಳಲ್ಲಿ ನಡೆದುಕೊಂಡಿದ್ದರು ಎಂದು ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ಇನ್ನು ಈ ನಟಿ ಕನ್ನಡದಲ್ಲಿ ಶಿವಣ್ಣ ಅಭಿನಯದ ಪರಮೇಶ ಪಾನ್ವಾಲಾ ಮತ್ತು ಅರ್ಜುನ್ ಸರ್ಜಾ ಅಭಿನಯದ ಅಭಿಮನ್ಯು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಳು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article