ಶ್ರೀಮಂತ ದೇವರ ಪಟ್ಟಿಯಲ್ಲಿ ಹಾಗು ದೇವಾಲಯದ ಪಟ್ಟಿಯಲ್ಲಿ ಮೊದಲಿರುವುದು ತಿರುಪತಿ ತಿಮ್ಮಪ್ಪನ ದೇವಾಲಯ ಅಲ್ಲಿ ಭಕ್ತಾದಿಗಳು ಲಕ್ಷಾಂತರ ಹಣ ಹುಂಡಿಗೆ ಹಾಕುವುದು ಹೊಸದೇನಲ್ಲ ಆದರೆ ಒಂದೆ ಬಾರಿ ಬೆಂಗಳೂರಿನ ಐಟಿ ಕಂಪನಿಯೊಂದರ ಮಾಲೀಕರಾದ ಅಮರನಾಥ್ ಚೌಧುರಿ ಹಾಗೂ ಪತ್ನಿ ಅವರು ದೇಗುಲದ ಗೋಸಂರಕ್ಷಣಾ ಟ್ರಸ್ಟಿಗೆ 1 ಕೋಟಿ ರು ಅರ್ಪಿಸಿದ್ದಾರೆ ಎಂದು ದೇಗುಲದ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಟಿಟಿಡಿ ಕಾರ್ಯಕಾರಿ ಅಧಿಕಾರಿ ಎವಿ ಧರ್ಮ ರೆಡ್ಡಿ ಅವರಿಗೆ 1 ಕೋಟಿ ರು ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ನೀಡಲಾಗಿದೆ. ಬೆಂಗಳೂರಿನಲ್ಲಿ 9 ವರ್ಷಗಳಿಂದ ಸಾಫ್ಟ್ ವೇರ್ ಕಂಪನಿ ನಡೆಸುತ್ತಿರುವ ಅಮರನಾಥ್ ಅವರು ತಿರುಪತಿ ಬಾಲಾಜಿಯ ಪರಮಭಕ್ತರಾಗಿದ್ದಾರೆ ಹಾಗಾಗಿ ಅವರು ದೇವರಿಗೆ ಅರ್ಪಿಸಿ