ತಿರುಪತಿ ತಿರುಮಲ ದೇವಸ್ಥಾನ ಮಂಡಳಿಗೆ (TTD) ನೂತನ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರು ಆದೇಶ ನೀಡಿದ್ದರು. ಈ ಆದೇಶದ ಪ್ರಕಾರ ಇದೀಗ ಟಿಟಿಡಿಗೆ ನೂತನ ಸದಸ್ಯರ ನೇಮಕ ಮಾಡಲಾಗಿದ್ದು ಕರ್ನಾಟಕದಿಂದ ಮೂವರು ಸದಸ್ಯರನ್ನು ನೇಮಿಸಲಾಗಿದೆ.
ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥೆ ಸುಧಾ ಮೂರ್ತಿ ಅವರನ್ನು ಟಿಟಿಡಿ ಸದಸ್ಯೆಯಾಗಿ ನೇಮಕ ಮಾಡಲಾಗಿದ್ದು ಈ ಹಿಂದೆಯೂ ಸಹ ಸುಧಾಮೂರ್ತಿ ಅವರನ್ನು ಟಿಟಿಡಿ ಮಂಡಳಿ ಸದಸ್ಯೆಯಾಗಿ ನೇಮಕ ಮಾಡಲಾಗಿತ್ತು ತದನಂತರ ಸುಧಾಮೂರ್ತಿಯವರು ಟಿಟಿಡಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಇದೀಗ ಮತ್ತೊಮ್ಮೆ ಸುಧಾಮೂರ್ತಿಯವರನ್ನು ಟಿಟಿಡಿ ಸದಸ್ಯೆಯಾಗಿ ನೇಮಕ ಮಾಡಲಾಗಿದ್ದು ಅವರ ಜೊತೆ ಕರ್ನಾಟಕದ ಸಂಪತ್ತು ರವಿ ನಾರಾಯಣ & ರಮೇಶ್ ಶೆಟ್ಟಿ ಅವರನ್ನು ಟಿಟಿಡಿ ಸದಸ್ಯರಾಗಿ ನೇಮಿಸಲಾಗಿದೆ.
ವಿಶೇಷವೇನೆಂದರೆ ಕಳೆದ ಬಾರಿ ಚಂದ್ರಬಾಬು ನಾಯ್ಡು ಅವರ ಸರ್ಕಾರ ಇದ್ದಾಗ ಕರ್ನಾಟಕದಿಂದ ಕೇವಲ ಸುಧಾಮೂರ್ತಿಯವರನ್ನು ಸದಸ್ಯೆಯಾಗಿ ನೇಮಿಸಲಾಗಿತ್ತು ಆದರೆ ಈ ಬಾರಿ ಒಟ್ಟು ಮೂವರು ಸದಸ್ಯರನ್ನು ಟಿಟಿಡಿಗೆ ನೇಮಿಸಲಾಗಿದೆ.