ಕನ್ನಡತಿ ಶಿಲ್ಪಾ ಶೆಟ್ಟಿ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಪ್ರೀತ್ಸೋದು ತಪ್ಪಾ ಎಂದು ರವಿಚಂದ್ರನ್ ಜೊತೆ ನಟಿಸಿದ್ದ ಈ ನಟಿ ಬಾಲಿವುಡ್ ನಲ್ಲಿ ಮತ್ತೆ ಸುದ್ದಿಯಾಗಿದ್ದಾರೆ
13 ವರ್ಷದ ಬಳಿಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಿದ್ಧತೆ ನಡೆಸಿಕೊಂಡಿದ್ದೇನೆ. ಇದೊಂದು ವಿಶೇಷ ಅನುಭವ. ಚಿತ್ರದ ಸ್ಕ್ರಿಪ್ಟ್ ಇಷ್ಟವಾಯಿತು. ಆದ್ದರಿಂದ ಮತ್ತೊಮ್ಮೆ ಚಿತ್ರದಲ್ಲಿ ನಟಿಸಲು ಮುಂದಾಗಿದ್ದೇನೆ ಎಂದಿದ್ದಾರೆ.
2007ರಲ್ಲಿ ಅಪ್ನೆ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶಿಲ್ಪಾ, ಇದೀಗ ನಿಕಮ್ಮಾ ಚಿತ್ರದಲ್ಲಿ ಅಭಿಮನ್ಯು ದೇಸಾಯಿ ಹಾಗೂ ಶಿರ್ಲೆ ಸೇಟಿಯಾ ಜತೆ ನಟಿಸಲಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪ್ರಕಾರ ಇದೊಂದು ಕಾಮಿಡಿ ರೋಮ್ಯಾಂಟಿಕ್ ಚಿತ್ರವಾಗಿದ್ದು, ಶಬ್ಬೀರ್ ಖಾನ್ ತಮಗೆ ಉತ್ತಮ ಪಾತ್ರವನ್ನು ನೀಡಿದ್ದಾರೆ ಎಂದಿದ್ದಾರೆ ಇನ್ನು 13 ವರ್ಷದ ಬಳಿಕ ತೆರೆಯ ಮೇಲೆ ಕಾಣಿಸಿಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ್ದು, ಒಮ್ಮೆ ನಟರಾದ ಮೇಲೆ ಜೀವನಪೂರ್ತಿ ನಟರು ಎಂದಿದ್ದಾರೆ.